-->

Punishment for accused in a theft case- ಕಳವು ಆರೋಪಿಗೆ ಜೈಲು ಶಿಕ್ಷೆ ಪ್ರಕಟಿಸಿದ ಪುತ್ತೂರು ನ್ಯಾಯಾಲಯ

Punishment for accused in a theft case- ಕಳವು ಆರೋಪಿಗೆ ಜೈಲು ಶಿಕ್ಷೆ ಪ್ರಕಟಿಸಿದ ಪುತ್ತೂರು ನ್ಯಾಯಾಲಯ

ಕಳವು ಆರೋಪಿಗೆ ಜೈಲು ಶಿಕ್ಷೆ ಪ್ರಕಟಿಸಿದ ಪುತ್ತೂರು ನ್ಯಾಯಾಲಯ



ಪುತ್ತೂರು ನಗರದಲ್ಲಿ 2006ರ ಮಾರ್ಚ್ 16ರಂದು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಪುತ್ತೂರು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.



ಘಟನೆಯ ವಿವರ

ದಿನಾಂಕ: 14-03-2006 ರಿಂದ 16-03-2006 ರ ಮಧ್ಯೆ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮಹೇಂದ್ರ ಕುಮಾರ್ ತಂದೆ: ಸುಂದರ ನಾಯ್ಕರವರ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು.



ಆರೋಪಿಗಳಾದ ಸಂತೋಷ ಮತ್ತು ನಾಗರಾಜ್ ಬಳೆಗಾರ ಎಂಬವರು ಮನೆಯ ಬಾಗಿಲಿನ ಬೀಗದ ಕೊಂಡಿಯನ್ನು ಬಲತ್ಕಾರವಾಗಿ ತುಂಡರಿಸಿ ತೆಗೆದು ಒಳ ಪ್ರವೇಶಿಸಿ ಸೂಟ್ ಕೇಸ್ ನಲ್ಲಿದ್ದ ಸುಮಾರು 43,000/- ಬೆಲೆಬಾಳುವ 50.930 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.



ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕರಾದ ತಿಲಕ್ ಚಂದ್ರ ರವರು ಸೊತ್ತು ಹಾಗೂ ಆರೋಪಿಗಳಾದ ಸಂತೋಷ ಮತ್ತು ನಾಗರಾಜ್ ಬಳೆಗಾರ ಎಂಬವರನ್ನು ಬಂಧಿಸಿ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿಕೊಂಡದ್ದರು.



ಆಗಿನ ಪುತ್ತೂರು ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಕೃಷ್ಣ ನಾಯ್ಕ್ ಆರೋಪಿಗಳ ಮೇಲೆ ದೋಷರೋಪಣಾಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.



ಈ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪ್ರಮುಖ ಆರೋಪಿಯಾದ ನಾಗರಾಜ್ ಬಳೆಗಾರ (34) ತಂದೆ: ಪ್ರಬಾಕರ ಬಳೆಗಾರ ವಾಸ: ವಿದ್ಯಾನಗರ ಹೊನ್ನಕಟ್ಟೆ ಸುರತ್ಕಲ್ ಮಂಗಳೂರು ತಾಲೂಕು ಎಂಬಾತನಿಗೆ ಶಿಕ್ಷೆ ಪ್ರಕಟಿಸಿದೆ.


ಕಲಂ: 457 ಐ.ಪಿ.ಸಿ ಗೆ ಸಂಬಂಧಿಸಿದಂತೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 5,000/- ರೂ ಗಳ ದಂಡವನ್ನು ವಿಧಿಸಿದೆ ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ.


ಕಲಂ: 380 ಐ.ಪಿ.ಸಿ ಗೆ ಸಂಬಂಧಿಸಿದಂತೆ 4 ವರ್ಷಗಳ ಕಾರಾಗೃಹ ವಾಸ ಹಾಗೂ 4,000/- ರೂ ಗಳ ದಂಡ ತಪ್ಪಿದ್ದಲ್ಲಿ 5 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ಪ್ರಕಟಿಸಿದೆ . ಆರೋಪಿಯು ಪ್ರಸ್ತುತ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗಬಂಧನ ದಲ್ಲಿರುತ್ತಾನೆ

Ads on article

Advertise in articles 1

advertising articles 2

Advertise under the article