-->
8ತಿಂಗಳ ಮಗುವಿದ್ದರೂ ತಾಯಿ ಮನಸ್ಸು ಕರಗಲಿಲ್ಲ: ಪಿಡಿಒ ಪತ್ನಿ ಆತ್ಮಹತ್ಯೆಗೆ ಶರಣು

8ತಿಂಗಳ ಮಗುವಿದ್ದರೂ ತಾಯಿ ಮನಸ್ಸು ಕರಗಲಿಲ್ಲ: ಪಿಡಿಒ ಪತ್ನಿ ಆತ್ಮಹತ್ಯೆಗೆ ಶರಣು

ಚಾಮರಾಜನಗರ: 8 ತಿಂಗಳ ಮಗುವನ್ನು ತೊರೆದು ಗ್ರಾಪಂ ಪಿಡಿಒ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ. ಹನೂರು ತಾಲೂಕಿನ ಹೂಗ್ಯಂ ಗ್ರಾಪಂ ಪಿಡಿಒ ಆನಂದ್ ಕಾಂಬ್ಳೆಯವರ ಪತ್ನಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವವವರು.

ಆನಂದ್ ಕಾಂಬ್ಳೆಯವರೊಂದಿಗೆ 3 ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಗ್ರಾಮದ ದಿವ್ಯಾಗೆ  ವಿವಾಹವಾಗಿತ್ತು. ದಂಪತಿ ಕೊಳ್ಳೇಗಾಲದಲ್ಲಿ ವಾಸವಿದ್ದರು. ದಂಪತಿಗೆ 8 ತಿಂಗಳ ಹೆಣ್ಣು ಮಗು ಇತ್ತು. ಆದರೆ ಕೌಟುಂಬಿಕ ಕಲಹದಿಂದ ಬೇಸತ್ತ ದಿವ್ಯಾ ಇದೀಗ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಈ ಬಗ್ಗೆ ಕೊಳ್ಳೇಗಾಲ ಪೊಲೀಸ್​ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದ್ದು, ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay RS 100

  

Advertise under the article