-->
ಪುತ್ರಿಯ ವಾಟ್ಸ್ಆ್ಯಪ್ ಸ್ಟೇಟಸ್ ತಾಯಿಯ ಜೀವಕ್ಕೇ ಕುತ್ತಾಯಿತು!

ಪುತ್ರಿಯ ವಾಟ್ಸ್ಆ್ಯಪ್ ಸ್ಟೇಟಸ್ ತಾಯಿಯ ಜೀವಕ್ಕೇ ಕುತ್ತಾಯಿತು!

ಮುಂಬೈ: ಪುತ್ರಿ ಹಾಕಿರುವ ವಾಟ್ಸ್‌ಆ್ಯಪ್ ಸ್ಟೇಟಸ್‌ನಿಂದಾಗಿ ತಾಯಿ ಕೊಲೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

20 ವರ್ಷದ ಯುವತಿಯೋರ್ವಳು ಇತ್ತೀಚೆಗೆ ತನ್ನ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಒಂದನ್ನು ಹಾಕಿದ್ದಳು. ಅದು ಯಾರಿಗೋ ಬೈಯುವ ರೀತಿಯಲ್ಲಿತ್ತು. ಅದನ್ನು ನೋಡಿರುವ ಆಕೆಯ ಸ್ನೇಹಿತೆಯೋರ್ವಳು, ತನ್ನನ್ನು ಬೈಯುವುದಕ್ಕೆಂದೇ ಈ ಸ್ಟೇಟಸ್‌ ಹಾಕಲಾಗಿದೆ ಎಂದು ತಿಳಿದುಕೊಂಡು ಈ ಬಗ್ಗೆ ತನ್ನ ತಾಯಿಯ ಬಳಿ ದೂರು ನೀಡಿದ್ದಾಳೆ.

ಫೆ.10ರಂದು ಆ ಯುವತಿಯ ಕುಟುಂಬ, ಸ್ಟೇಟಸ್‌ ಹಾಕಿರುವ ಯುವತಿಯ ತಾಯಿ ಲೀಲಾವತಿ ದೇವಿ ಬಳಿ ಬಂದು ಜಗಳವಾಡಿದ್ದಾರೆ. ಆ ಸಂದರ್ಭ ನಡೆದ ವಾದ-ವಿವಾದದಲ್ಲಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಪರಿಣಾಮ ಗಂಭೀರ ಗಾಯಗೊಂಡಿದ್ದ ಲೀಲಾವತಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article