ಉಕ್ರೇನ್ ಉಳಿಸಲು ರಷ್ಯಾ ವಿರುದ್ಧ ಗನ್ ಹಿಡಿದ 'ಮಾಜಿ ಉಕ್ರೇನ್ ಸುಂದರಿ'

ಉಕ್ರೇನ್: ರಷ್ಯಾ ಸೈನಿಕರು ಉಕ್ರೇನ್ ರಾಜಧಾನಿ ಕೀವ್​ ಅನ್ನು ವಶಪಡಿಸುವ ಉದ್ದೇಶದಿಂದ ದಾಳಿಯನ್ನು ಮುಂದುವರೆಸಿದೆ. ಇದರ ಬೆನ್ನಲ್ಲೇ 'ಮಾಜಿ ಮಿಸ್ ಗ್ರ್ಯಾಂಡ್ ಉಕ್ರೇನ್' ಅನಸ್ತಾಸಿಯಾ ಲೆನ್ನಾ ಅವರು ರಷ್ಯಾ ಆಕ್ರಮಣವನ್ನು ಕೆಚ್ಚೆದೆಯಿಂದ ಎದುರಿಸಲು ಉಕ್ರೇನಿಯನ್ ಮಿಲಿಟರಿ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

'ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್-2015'ರ ಸೌಂದರ್ಯ ಸ್ಪರ್ಧೆಯಲ್ಲಿ ಅನಸ್ತಾಸಿಯಾ ಲೆನ್ನಾ ಉಕ್ರೇನ್‌ ಅನ್ನು ಪ್ರತಿನಿಧಿಸಿದ್ದರು. ಈಕೆ ಇನ್ಸ್​ಸ್ಟಾಗ್ರಾಮ್​ನಲ್ಲಿ 89.7 ಸಾವಿರ ಫಾಲೋವರ್ಸ್​ ಹೊಂದಿದ್ದಾರೆ. ರಷ್ಯಾದ ಆಕ್ರಮಣದ ಆಕ್ರೋಶ ವ್ಯಕ್ತಪಡಿಸಿರುವ ಅನಸ್ತಾಸಿಯಾ ಲೆನ್ನಾ ಶನಿವಾರ ಸೈನಿಕರು ರಸ್ತೆಯನ್ನು ತಡೆಯುತ್ತಿರುವ ಫೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಅಲ್ಲದೆ 'ಆಕ್ರಮಣ ಮಾಡುವ ಉದ್ದೇಶದಿಂದ ಉಕ್ರೇನಿಯನ್ ಗಡಿ ದಾಟುವ ಪ್ರತಿಯೊಬ್ಬರೂ ಕೊಲ್ಲಲ್ಪಡುತ್ತಾರೆ' ಎಂದು ಎಚ್ಚರಿಸಿದ್ದಾರೆ. ಇದೀಗ ತಮ್ಮ ಇನ್‌ಸ್ಟಾಗ್ರಾಂನಲ್ಲಿನ ಮತ್ತೊಂದು ಫೋಟೊವನ್ನು ಪೋಸ್ಟ್‌ ಮಾಡಿರುವ ಲೆನ್ನಾ, ಆಯುಧಗಳೊಂದಿಗೆ ಪೋಸ್ ಕೊಟ್ಟಿದ್ದಾರೆ.

ಇವರಿಗಿಂತ ಮೊದಲು ಉಕ್ರೇನ್ ಸಂಸದೆ ಕಿರಾ ರುಡಿಕ್ ಅವರೂ ಗನ್ ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪುರುಷರಂತೆ ಮಹಿಳೆಯರೂ ತಮ್ಮ ತಾಯ್ನಾಡನ್ನು ರಕ್ಷಿಸುತ್ತಾರೆ. ನಾನೂ ಸಹ ಬಂದೂಕುಗಳ ಪ್ರಯೋಗವನ್ನು ಕಲಿಯುತ್ತೇನೆ. ಶಸ್ತ್ರಾಸ್ತ್ರಗಳನ್ನು ಹೊರಲು ತಯಾರಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu