ಮಂಗಳೂರು: ದ.ಕ.ಜಿಲ್ಲೆಯ ಟಿಕ್ ಟಾಕ್ ಸ್ಟಾರ್ ಕಮಲಜ್ಜಿ ಇನ್ನಿಲ್ಲ

ವಿಟ್ಲ: ದ.ಕ.ಜಿಲ್ಲೆಯ ಟಿಕ್ ಟಾಕ್ ಸ್ಟಾರ್ ಧನರಾಜ್ ರೊಂದಿಗೆ ಸಾಕಷ್ಟು ಟಿಕ್ ಟಾಕ್ ಹಾಸ್ಯ ವೀಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ ಟಾಕ್ ಕಮಲಜ್ಜಿ ಯಾನೆ ಕಮಲ (85) ಇಂದು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.  

ಟಿಕ್ ಟಾಕ್ ಸ್ಟಾರ್ ಧನರಾಜ್ ರೊಂದಿಗೆ ಕಮಲಜ್ಜಿ ಸುಮಾರು 50ಕ್ಕೂ ಅಧಿಕ ವೀಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು. ಇವರ ಇಡೀ ಕುಟುಂಬವೇ ಟಿಕ್ ಟಾಕ್ ಫ್ಯಾಮಿಲಿ ಎಂದು ಹೆಸರು ಗಳಿಸಿದೆ. ತಮ್ಮ ಇಳಿವಯಸ್ಸಿನಲ್ಲೂ ಕಮಲಜ್ಜಿ ಟಿಕ್ ಟಾಕ್ ವೀಡಿಯೋಗಳಲ್ಲಿ ಮಾಡುತ್ತಿದ್ದ ಅಭಿನಯ, ಮಾತಿನ ವೇಗ, ಮನೆಮಂದಿಯ ಜೊತೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಅವರು ಹೊಂದಿದ್ದರು. ಪ್ರಸೂತಿ ತಜ್ಞೆಯಾಗಿದ್ದ ಕಮಲಜ್ಜಿ ಪರೋಪಕಾರ ಮನಸ್ಸಿನವರಾಗಿದ್ದರು.‌ ಮೃತರು ಆರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu