ವಿಟ್ಲ: ವಿದ್ಯುತ್ ಬಿಲ್ ಕೊಡುವ ನೆಪದಲ್ಲಿ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಒಂಟಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಚಿನ್ನಾಭರಣದೊಂದಿಗೆ ಪರಾರಿ

ವಿಟ್ಲ: ವಿದ್ಯುತ್ ಬಿಲ್ ಕೊಡುವ ನೆಪದಲ್ಲಿ ಇಬ್ಬರು ದುಷ್ಕರ್ಮಿಗಳು ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿರುವ ಇಬ್ಬರು ದುಷ್ಕರ್ಮಿಗಳು, ಒಂಟಿ ಮಹಿಳೆಯ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸು, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ವಿಟ್ಲದ ಅಡ್ಡದ ಬೀದಿ ಎಂಬಲ್ಲಿ ನಡೆದಿದೆ.

ಪ್ರಕರಣದಲ್ಲಿ ಸುಲೈಮಾನ್ ಎಂಬವರ ಪತ್ನಿ ಬೀಪಾತುಮ್ಮ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೀಪಾತುಮ್ಮ ಅವರ ಪತಿ ಸುಲೈಮಾನ್ ಅಡ್ಡದ ಬೀದಿಯಲ್ಲಿ ಎಳನೀರು ವ್ಯಾಪಾರ ವೃತ್ತಿ ಮಾಡುವವರು. ಮಧ್ಯಾಹ್ನ ಮನೆಗೆ ಬಂದು ಅವರು ಮತ್ತೆ ಎಳನೀರು ವ್ಯಾಪಾರಕ್ಕೆಂದು ಹಿಂತಿರುಗಿದ್ದರು. ಈ ವೇಳೆ ಮನೆಯಲ್ಲಿ ಬೀಪಾತುಮ್ಮ ಒಬ್ಬರೇ ಇದ್ದರು. ಆಗ ದುಷ್ಕರ್ಮಿಗಳಿಬ್ಬರು ವಿದ್ಯುತ್ ಬಿಲ್ ಕೊಡುವ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಬಳಿಕ ಬೀಪಾತುಮ್ಮರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಆರೋಪಿಗಳು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.