-->
ಟೀ ಕುಡಿಯಲೆಂದು ಅಂಗಡಿ ಬಾಗಿಲು ಮುಚ್ಚದೆ ಹೋದ ಮಾಲಕನಿಗೆ ಕಾದಿತ್ತು ಶಾಕ್!

ಟೀ ಕುಡಿಯಲೆಂದು ಅಂಗಡಿ ಬಾಗಿಲು ಮುಚ್ಚದೆ ಹೋದ ಮಾಲಕನಿಗೆ ಕಾದಿತ್ತು ಶಾಕ್!

ದಾವಣಗೆರೆ: ಹತ್ತಿದಲ್ಲೇ ಇದ್ದ ಹೊಟೇಲ್ ಗೆ ಟೀ ಕುಡಿಯಲೆಂದು ಅಂಗಡಿ ಬಾಗಿಲು ಮುಚ್ಚದೇ ಹೊರಗಡೆ ಹೋದ ಮಾಲಕ ಈಗ ತಲೆಮೇಲೆ ಕೈಹೊತ್ತು ಕುಳಿತಿರಬೇಕಾದ ಪರಿಸ್ಥಿತಿ ಎದುರಾಗಿದೆ. ದಾವಣಗೆರೆಯಲ್ಲಿ ಈ ಒಂದು ಘಟನೆ ನಡೆದಿದೆ. 

ಅಂಗಡಿ ಮಾಲಕ ಟೀ ಕುಡಿಯಲೆಂದು ಹೋಗಿದ್ದಾನೆ. ಈ  ಸಂದರ್ಭ ಅಂಗಡಿಯಲ್ಲಿ ಯಾರೂ ಇಲ್ಲದಿರುವುನ್ನು ಗಮನಿಸಿರುವ ಆಗಂತುಕನೋರ್ವ ಕ್ಯಾಶ್​ ಕೌಂಟರ್​ನಲ್ಲಿದ್ದ 10 ಸಾವಿರ ರೂ. ಹಣ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ದಾವಣಗೆರೆಯ ಹದಡಿ‌ ರಸ್ತೆಯಲ್ಲಿರುವ ಕಲ್ಲೇಶ್ವರ ಟೈಲ್ಸ್ ಶಾಪ್‌ನಲ್ಲಿ ನಡೆದಿದೆ. ಹಣ ಕಳುವು ಮಾಡಿರುವ ಸಂಪೂರ್ಣ ದೃಶ್ಯ ಸಿಸಿ‌‌ಟಿವಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. 

ಟೀ ಕುಡಿದು ಬಂದ ಮಾಲಕ ಕ್ಯಾಶ್​ ಕೌಂಟರ್​ ನೋಡಿದಾಗ ಹಣ ಇಲ್ಲದಿರುವುದನ್ನು ಗಮನಿಸಿ ಶಾಕ್​ ಆಗಿದ್ದಾರೆ. ತಕ್ಷಣ ಆತ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article