-->
ಪಡುಬಿದ್ರೆ: ವರ್ಕ್ ಫ್ರಮ್ ಹೋಮ್ ನಲ್ಲಿದ್ದ ಟೆಕ್ಕಿ ಯುವತಿ ನೇಣಿಗೆ ಶರಣು

ಪಡುಬಿದ್ರೆ: ವರ್ಕ್ ಫ್ರಮ್ ಹೋಮ್ ನಲ್ಲಿದ್ದ ಟೆಕ್ಕಿ ಯುವತಿ ನೇಣಿಗೆ ಶರಣು

ಪಡುಬಿದ್ರೆ: ಇಲ್ಲಿನ ಬ್ರಹ್ಮಸ್ಥಾನ ರಸ್ತೆ ಬಳಿಯ ನಿವಾಸಿ ಟೆಕ್ಕಿ ಯುವತಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಹೈದರಾಬಾದ್ ನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಸೌಜನ್ಯಾ(22) ಆತ್ಮಹತ್ಯೆ ಮಾಡಿಕೊಂಡವರು.

ಸೌಜನ್ಯಾ ಮನೆಯ ಸೀಲಿಂಗ್ ನ ಕಬ್ಬಿಣದ ಕೊಕ್ಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಹೈದರಾಬಾದ್ ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ 10 ತಿಂಗಳುಗಳಿಂದ ವರ್ಕ್ ಫ್ರಂ ಹೋಮ್ ನಲ್ಲಿ ಮನೆಯಲ್ಲಿದ್ದರು.

ಗುರುವಾರ ಹೆತ್ತವರು ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಅವರಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article