-->
ದಿನವೊಂದರ ಅಂತರಲ್ಲಿ ಪ್ರೀತಿಯ ಬಲೆಗೆ ಬಿದ್ದಿದ್ದ ಜೋಡಿ ಆತ್ಮಹತ್ಯೆ

ದಿನವೊಂದರ ಅಂತರಲ್ಲಿ ಪ್ರೀತಿಯ ಬಲೆಗೆ ಬಿದ್ದಿದ್ದ ಜೋಡಿ ಆತ್ಮಹತ್ಯೆ

ಚಾಮರಾಜನಗರ: ದಿನವೊಂದರ ಅಂತರದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಯೊಂದು ಹನೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.‌ ಪ್ರಕರಣದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಹಾಗೂ 29 ವರ್ಷದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಆತ್ಮಹತ್ಯೆ ಮಾಡಿಕೊಂಡ ಜೋಡಿ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿತ್ತು. ಈ ವಿಚಾರ ಮನೆಯವರಿಗೂ ಗೊತ್ತಾಗಿತ್ತು. ಇವರಿಬ್ಬರೂ ಸಂಬಂಧಿಕರಾಗಿರುವುದರಿಂದ ಇವರ ಪ್ರೀತಿಗೆ ಮನೆಯಿಂದ ಯಾವುದೇ ತಕರಾರು ಬಂದಿರಲಿಲ್ಲ ಎಂದು ತಿಳಿದು ಬಂದಿದೆ.

ಆದರೆ ಸೋಮವಾರ ಶೌಚಾಲಯಕ್ಕೆ ತೆರಳಿದ್ದ ಬಾಲಕಿಯು ಪ್ರಿಯಕರನೊಂದಿಗೆ ಫೋನಿನಲ್ಲಿ ಏನೋ ಮಾತನಾಡಿದ್ದಾಳೆ. ಅ ಬಳಿಕ ಅದೇನಾಯ್ತೋ ಗೊತ್ತಿಲ್ಲ, ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿದ್ದಾಳೆ. 

ಪರಿಣಾಮ ತೀವ್ರವಾಗಿ ಮನನೊಂದ ಯುವಕ ಕುರಿಯನ್ನು ಕಟ್ಟುವ ಹಗ್ಗದಿಂದ ನೇಣು ಬಿಗಿದು ಅಸುನೀಗಿದ್ದಾನೆ. ಈ ಪ್ರಕರಣ ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಯಾಯ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article