-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಾಗರಹಾವು: ದೃಶ್ಯ ಕಂಡು ಪುಳಕಿತರಾದ ಭಕ್ತರು

ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಾಗರಹಾವು: ದೃಶ್ಯ ಕಂಡು ಪುಳಕಿತರಾದ ಭಕ್ತರು

ಬುಂದೇಲ್​ಖಂಡ (ಮಧ್ಯಪ್ರದೇಶ):  ವಿಜ್ಞಾನ, ತಂತ್ರಜ್ಞಾನ, ವೈದ್ಯ ವಿಜ್ಞಾನ ಯಾವ ತರ್ಕಕ್ಕೂ ಊಹೆಗೂ ನಿಲುಕದಂತಹ ಕೆಲವೊಂದು ಘಟನೆಗಳು ನಡೆಯುತ್ತಿರುತ್ತವೆ. ಇದನ್ನು ಪವಾಡ ಎನ್ನಬಹುದೇನೋ. ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಅಂಥಹದ್ದೇ ಯಾರ ಊಹೆಗೂ ನಿಲುಕದ ಘಟನೆಯೊಂದು ಮಧ್ಯಪ್ರದೇಶದ ಜಟಾಶಂಕರ ಧಾಮದಲ್ಲಿ ನಡೆದಿದೆ. 

ಜಟಾಶಂಕರ ಧಾಮದ ಬುಂದೇಲ್​ಖಂಡದ ಕೇದಾರನಾಥದಲ್ಲಿರುವ ಶಿವಧಾಮದಲ್ಲಿ ಈ ಪವಾಡವು ನಡೆದಿದೆ. ಸದಾ ಪವಾಡಗಳಿಗೆ ಖ್ಯಾತಿ ಹೊಂದಿರುವ ಶಿವಧಾಮದಲ್ಲಿ ಮೊನ್ನೆ ರಾತ್ರಿ ದೇವಸ್ಥಾನಕ್ಕೆ ಆಗಮಿಸಿರುವ ಹಾವೊಂದು ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದೆ. ಈ ಸಂಪೂರ್ಣ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಶಿವಲಿಂಗದ ಸುತ್ತಲೂ ಹಾವು ಅನೇಕ ಸಲ ಪ್ರದಕ್ಷಿಣೆ ಹಾಕಿದೆ. ಈ ದೃಶ್ಯವನ್ನು ಕಂಡು ಭಕ್ತರು ಪುನೀತರಾಗಿದ್ದಾರೆ.‌ ರಾತ್ರಿ ಬೆಳಗಾಗುವುದರೊಳಗೆ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 ಈ ಕುರಿತು ಟ್ರಸ್ಟ್​ನ ಅಧೀಕ್ಷಕ ಜೆ.ಪಿ ಖರೆ ಮಾತನಾಡಿದ್ದು, ಈ ವಿಚಾರ ಹೊಸದನೇಲ್ಲ. ಈ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯುವ ದಿನ ಈ ಸರ್ಪ ಇಲ್ಲಿಗೆ ಬರುತ್ತದೆ. ಇಲ್ಲಿಯವರೆಗೂ ಯಾರಿಗೂ ಕೂಡ ಅಪಾಯವನ್ನೂ ಮಾಡಿಲ್ಲ. ನಿನ್ನೆ ರಾತ್ರಿ ಕೂಡ ಬಂದಿದೆಯಷ್ಟೇ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article