-->
ಮಗುವೊಂದನ್ನು ದತ್ತು ಪಡೆಯಲು ಚಿಂತನೆ ನಡೆಸಿದ್ದ ಆರ್​ಜೆ ರಚನಾ: ಅದಕ್ಕಿಂತ ಮೊದಲೇ ಭೂಮಿಯ ಯಾತ್ರೆ ಅಂತ್ಯ

ಮಗುವೊಂದನ್ನು ದತ್ತು ಪಡೆಯಲು ಚಿಂತನೆ ನಡೆಸಿದ್ದ ಆರ್​ಜೆ ರಚನಾ: ಅದಕ್ಕಿಂತ ಮೊದಲೇ ಭೂಮಿಯ ಯಾತ್ರೆ ಅಂತ್ಯ

ಬೆಂಗಳೂರು: ರೇಡಿಯೊ ಜಾಕಿ ಪಟಪಟನೇ ಮಾತನಾಡುತ್ತ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ರೇಡಿಯೋ ಜಾಕಿ (ಆರ್​ಜೆ) ರಚನಾ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಈ ಸಂದರ್ಭವೂ ಅವರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದರು‌.

ಇದೀಗ ಆರ್ ಜೆ ರಚನಾ ಕುರಿತಂತೆ ಇನ್ನೋರ್ವ ಪ್ರಸಿದ್ಧ ರೇಡಿಯೋ ಜಾಕಿ ರ‍್ಯಾಪಿಡ್ ರಶ್ಮಿ ಮಾತನಾಡಿದ್ದಾರೆ. ರಚನಾ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು. ಆಹಾರದ ಬಗ್ಗೆಯೂ ಅಷ್ಟೇ ಸ್ಪಷ್ಟತೆ ಹೊಂದಿದ್ದರು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡುತ್ತಿದ್ದರು. ಸಲಾಡ್​ಗಳನ್ನು ತಿನ್ನುವುದನ್ನು ಇಷ್ಟಪಡುತ್ತಿದ್ದರು. ಇಷ್ಟೆಲ್ಲಾ ಆದರೂ ಹೃದಯಾಘಾತ ಹೇಗಾಯಿತು ಎಂಬುದೇ ಅಚ್ಚರಿ ಎಂದಿದ್ದಾರೆ.

ರಚನಾ ಆರ್​ಜೆಯಾಗಿ ವೃತ್ತಿ ಜೀವನವನ್ನು ಆರಂಭಿಸುವ ಮೊದಲೇ ನಾವು ಬೇರೆ ಬೇರೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆವು. ಆಗಿನಿಂದಲೂ ನಾವು ಉತ್ತಮ ಸ್ನೇಹಿತರಾಗಿದ್ದೆವು. ಈಗ ರಚನಾ ದಿಢೀರ್​ ಎಂದು ಮೃತಪಟ್ಟಿರುವುದು ಮಾತ್ರ ಸಹಿಸಲಾಗುತ್ತಿಲ್ಲ. ರಚನಾ ಅವರೊಂದಿಗೆ ತನಗೆ ದೀರ್ಘಕಾಲದ ಒಡನಾಟವಿದ್ದರೂ ಇತ್ತೀಚೆಗೆ ಅವರು ಅಷ್ಟೊಂದು ಸಂಪರ್ಕದಲ್ಲಿರಲಿಲ್ಲ. ಆದರೆ ಆಕೆ ಮಗುವೊಂದನ್ನು ದತ್ತು ಪಡೆಯಲು ಯೋಚಿಸಿದ್ದರು. ಅವರ ಈ ಯೋಚನೆಯಿಂದ ನಾನು ಪ್ರಭಾವಿತಳಾಗಿದ್ದೆ. ಅದಕ್ಕೆ ನಾನು ಬೆಂಬಲವನ್ನು ಸೂಚಿಸಿದ್ದೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜೀವನದಲ್ಲಿ ಹೊಸದೇನನ್ನು ಮಾಡಲು ಹೋಗುವರಿಗೆ ಹೀಗಾಗುತ್ತದೆ ಎಂಬುದನ್ನು ಒಪ್ಪೊದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article