-->
ತಮ್ಮ ಫೋಟೋ ಎಡಿಟ್ ಮಾಡಿ ತಿರುಚಿ ವೈರಲ್ ಮಾಡುವವರ ವಿರುದ್ಧ ಗರಂ ಆದ ನಟಿ ಮಾಳವಿಕಾ ಮೋಹನನ್

ತಮ್ಮ ಫೋಟೋ ಎಡಿಟ್ ಮಾಡಿ ತಿರುಚಿ ವೈರಲ್ ಮಾಡುವವರ ವಿರುದ್ಧ ಗರಂ ಆದ ನಟಿ ಮಾಳವಿಕಾ ಮೋಹನನ್

ಚೆನ್ನೈ: ಮಲಯಾಳಂ ಬೆಡಗಿ ಮಾಳವಿಕಾ ಮೋಹನನ್‌ ತಮ್ಮ ಮಾಲ್ಡೀವ್ಸ್​ ಪ್ರವಾಸದಲ್ಲಿರುವ ಬಿಕಿನಿ ಫೋಟೋಗಳನ್ನು ಸಾಮಾಜಿಕ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇದೀಗ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿರುವ ಮಾಳವಿಕಾ, ಕೆಟ್ಟದಾಗಿ ಎಡಿಟ್​ ಮಾಡಿ ಹರಿಯಬಿಡುವವರ ವಿರುದ್ಧ ಹರಿಹಾಯ್ದಿದ್ದಾರೆ. 

ಇತ್ತೀಚಿಗೆ ಮಾಳವಿಕಾ ಮಾಲ್ಡೀವ್ಸ್ ಪ್ರವಾಸದಲ್ಲಿದ್ದ ತಮ್ಮ ಒಂದು ಫೋಟೋವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದರು. ಕೆಲ ತಿಂಗಳ ಹಿಂದೆ ತೆಗೆದ ನನ್ನ ಈ ಫೋಟೊವನ್ನು ಕೆಲವರು ಕೆಟ್ಟದಾಗಿ ಎಡಿಟ್ ತಿರುಚಿದ್ದಾರೆ. ಅದನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡುತ್ತಿದ್ದಾರೆ. ಅಲ್ಲದೆ, ಕೆಲ ಮಾಧ್ಯಮದಲ್ಲೂ ಈ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದು ಕಳಪೆ ಪತ್ರಿಕೋದ್ಯಮದ ಲಕ್ಷಣವಾಗಿದೆ. ನಕಲಿ ಫೋಟೋಗಳನ್ನು ನೋಡಿದ್ದಲ್ಲಿ ರಿಪೋರ್ಟ್​ ಮಾಡಿ ಸಹಾಯ ಮಾಡಿ ಎಂದು ಮಾಳವಿಕಾ ಮೋಹನನ್ ಕೇಳಿಕೊಂಡಿದ್ದಾರೆ. ಈ ರೀತಿಯಲ್ಲಿ ಫೋಟೋಗಳನ್ನು ತಿರುಚಿ ವೈರಲ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಅನೇಕ ನಟಿಯರು ಈ ರೀತಿಯಲ್ಲಿ ಸಂತ್ರಸ್ತೆಯರಾಗಿದ್ದಾರೆ. ಆದರೆ, ಕೆಲವೇ ಮಂದಿ ನಟಿಯರು ಮಾತ್ರ ಈ ಬಗ್ಗೆ ಧ್ವನಿ ಎತ್ತಿದರೆ, ಇನ್ನು ಕೆಲವು ಅದನ್ನು ನಿರ್ಲಕ್ಷಿಸಿ ತಮ್ಮ ಕೆಲಸದತ್ತ ಗಮನ ಹರಿಸುತ್ತಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಾಳವಿಕಾ ಮೋಹನನ್ ದಕ್ಷಿಣ ಭಾರತ ಸಿನಿಮಾಗಳಲ್ಲಿ ದಿನೇ ದಿನೆ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಟ ವಿಜಯ್​ ನಟನೆಯ ಮಾಸ್ಟರ್​ ಸಿನಿಮಾ ಮೂಲಕ ಮಾಳವಿಕ ಒಳ್ಳೆಯ ಹೆಸರು ಗಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article