-->
ನೆಟ್ಟಿಗರ ಕಮೆಂಟ್ಸ್ ಗಳಿಗೆ ಗರಂ ಆದ ನಿವೇದಿತಾ ಗೌಡ ಯೂಟ್ಯೂಬ್ ಮೂಲಕ ಖಡಕ್ ಉತ್ತರ

ನೆಟ್ಟಿಗರ ಕಮೆಂಟ್ಸ್ ಗಳಿಗೆ ಗರಂ ಆದ ನಿವೇದಿತಾ ಗೌಡ ಯೂಟ್ಯೂಬ್ ಮೂಲಕ ಖಡಕ್ ಉತ್ತರ

ಬೆಂಗಳೂರು: ಬಿಗ್​ಬಾಸ್​ ರಿಯಾಲಿಟಿ ಶೋ ಸ್ಪರ್ಧಿಯಾಗಿ ಅಲ್ಲಿಯೇ ರ್ಯಾಪರ್​ ಚಂದನ್​ ಶೆಟ್ಟಿ ಪರಿಚಯವಾಗಿ ಆ ಬಳಿಕ ಅವರನ್ನು ಮದುವೆಯಾಗಿರುವ ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಆಕ್ಟೀವ್​ ಆಗಿರುತ್ತಾರೆ. ಚಂದನ್​ ಶೆಟ್ಟಿಗಿಂತಲೂ ನಿವೇದಿತಾ ಗೌಡ ಇತ್ತೀಚೆಗೆ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. 

ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹೆಚ್ಚೆ ಹೆಚ್ಚು ಆಕ್ಟೀವ್​ ಆಗಿರುವ ನಿವೇದಿತಾ ಗೌಡ ಹಾಕುವ ಪ್ರತಿ ವೀಡಿಯೋ ಹಾಗೂ ಫೋಟೋಗಳಿಗೆ ಎಷ್ಟು ಮೆಚ್ಚುಗೆ ಕಾಮೆಂಟ್​ಗಳು ಬರುತ್ತವೆಯೋ ಅಷ್ಟೇ ಟೀಕೆಗಳು ಸಹ ಬರುತ್ತಿರುತ್ತವೆ. ಇದರಿಂದ ವಿಚಲಿತಗೊಂಡ ನಿವೇದಿತಾ ಗೌಡ ಯೂಟ್ಯೂಬ್​ ವೀಡಿಯೋ ಮೂಲಕ ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ. ದ್ವೇಷಿಸುವವರಿಗೆ ಪ್ರತ್ಯುತ್ತರ ಎಂಬ ಶೀರ್ಷಿಕೆಯಡಿಯಲ್ಲಿ ಯೂಟ್ಯೂಬ್​ ವೀಡಿಯೋ ಅಪ್​ಲೋಡ್​ ಮಾಡಿರುವ ನಿವೇದಿತಾ ಗೌಡ ನೆಗಿಟಿವ್​ ಕಾಮೆಂಟ್​ಗಳಿಗೆ ಖಡಕ್ಕಾಗಿ ಉತ್ತರ ನೀಡಿದ್ದಾರೆ. 

'ಕನ್ನಡ ಕಲಿ, ಇಲ್ಲಾಂದ್ರೆ ಇಂಗ್ಲಿಷ್​ ಚಾನೆಲ್​ ಶುರು ಮಾಡು' ಎಂದು ಕಮೆಂಟ್ಸ್ ಮಾಡಿರುವ ನೆಟ್ಟಿಗನಿಗೆ ಪ್ರತ್ಯುತ್ತರ ನೀಡಿರುವ ನಿವೇದಿತಾ ಗೌಡ,'ಯೂಟ್ಯೂಬ್​ ಒಂದು ಜಾಗತಿಕ ವೇದಿಕೆ. ನನ್ನ ಚಾನೆಲ್​ನಲ್ಲಿ ಎಲ್ಲ ರೀತಿಯ ಆಡಿಯನ್ಸ್​ ಗಳೂ ಇದ್ದಾರೆ. ಅದಕ್ಕೆ ನಾನು ಎರಡು ಭಾಷೆಯಲ್ಲೂ ಮಾತನಾಡುತ್ತೇನೆ' ಎಂದಿದ್ದಾರೆ. ಎಲ್ಲರ ಮನೆಯಲ್ಲಿ ನಿಮ್ಮ ರೀತಿಯ ಹೆಣ್ಣು ಮಗಳಿದ್ದರೆ ಆ ಕುಟುಂಬದ ಹೊಟ್ಟೆ ತುಂಬಿದಂತೆಯೇ ಎಂದು ಕಮೆಂಟ್ಸ್ ಮಾಡಿರುವ ನೆಟ್ಟಿಗನಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ನಿವೇದಿತಾ ಗೌಡ 'ಹೆಣ್ಣು ಮಕ್ಕಳೇ ಅಡುಗೆ ಮಾಡಬೇಕಾ? ಎಲ್ಲಾ ಕೆಲಸವನ್ನು ಹೆಣ್ಣು ಮಕ್ಕಳೇ ಮಾಡಬೇಕಾ? ಮನೆಯಲ್ಲಿ ಗಂಡು ಮಕ್ಕಳು ಯಾಕಿರುವುದು. ಗಂಡು ಮಕ್ಕಳು ಕೂಡ ಅಡುಗೆ ಮಾಡಲಿ, ಅವರು ಯಾವಾಗ ಇದನೆಲ್ಲಾ ಕಲಿಯೋದು? ಈ ರೀತಿಯ ಕಾಮೆಂಟ್ ಗಳನ್ನು ಮಾಡಬೇಡಿ. ಎಲ್ಲರೂ ಸಮಾನರು. ಎಲ್ಲ ಕೆಲಸವನ್ನು ಸಮಾನವಾಗಿ ಹಂಚಿಕೊಂಡು ಮಾಡಬೇಕು' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

'ಪ್ರಚಾರದ ವೀಡಿಯೋ ಮಾಡಿ ಜನರನ್ನು ಮೂರ್ಖರನ್ನಾಗಿಸಬೇಡಿ' ಎಂಬ ಕಾಮೆಂಟ್​ಗೆ 'ನಾನು ಪ್ರಾಡಕ್ಟ್​ ಗಳ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಇಷ್ಟವಾದವರು ತೆಗೆದುಕೊಳ್ಳುತ್ತಾರೆ. ತೆಗೆದುಕೊಳ್ಳಿ ಎಂದು ನಾನೇನು ಬಲವಂತ ಮಾಡಲ್ಲ' ಎಂದರು. 'ಮದುವೆಯಾಗಿದ್ದೀರಾ, ಆ ಮೇಲೆ ಇವೆಲ್ಲ ಯಾಕೆ? ಇಲ್ಲಿಗೆ ನಿಲ್ಸಿ, ನಿಮ್ಮ ಪತಿಯ ಮರ್ಯಾದೆ ಉಳಿಸಿ' ಎಂದು ಹೇಳಿರುವ ನೆಟ್ಟಿಗನಿಗೆ 'ನಾನು ಪತಿಯ ಮರ್ಯದೆ ತೆಗೆಯುವ ಯಾವ ಕೆಲಸವನ್ನೂ ಮಾಡಿಲ್ಲ. ನನ್ನ ಪತಿಗೆ ಹೊರೆಯಾಗದೆ ನಾನು ನನ್ನ ಕೈಲಾದಷ್ಟು ಸಂಪಾದನೆ ಮಾಡುತ್ತಿದ್ದೇನೆ. ಈ ರೀತಿ ಕೆಲಸ ಮಾಡುವುದರಲ್ಲಿ ಏನು ತಪ್ಪಿದೆ? ಈ ರೀತಿ ಕಾಮೆಂಟ್​ ಮಾಡಬೇಡಿ' ಎಂದು ಗರಂ ಆಗಿದ್ದಾರೆ.

'ನೀವು ಅರ್ಧಬರ್ಧಂ ಬಟ್ಟೆ ಹಾಕುವ ಬದಲು ಮೈತುಂಬಾ ಬಟ್ಟೆ ಹಾಕುವುದನ್ನು ಕಲಿಯಿರಿ' ಎಂದು ಕಾಲೆಳೆದಿರುವ​ ನೆಟ್ಟಿಗನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ನಿವೇದಿತಾ ಗೌಡ, 'ನನ್ನ ಬಟ್ಟೆ ನನ್ನ ಆಯ್ಕೆ. ನಿಮ್ಮ ಬಟ್ಟೆ ಅದು ನಿಮ್ಮ ಆಯ್ಕೆ ನೀವ್ಯಾರು ನನಗೆ ಹೇಳುವುದಕ್ಕೆ? ನಾನೇನಾದರೂ ಬಂದು ನಿಮ್ಮ ಬಟ್ಟೆಯ ಬಗ್ಗೆ ಕಮೆಂಟ್ಸ್ ಮಾಡಿದ್ದೇನಾ? ನಮ್ಮ ವೈಯುಕ್ತಿಕ ವಿಚಾರಗಳನ್ನು ಗೌರವಿಸಿ' ಎಂದು ಗರಂ ಆಗಿದ್ದಾರೆ. 

ಹೀಗೆ ಸಾಕಷ್ಟು ಕಾಮೆಂಟ್​ಗಳಿಗೆ ನಿವೇದಿತಾ ಗೌಡ ಉತ್ತರ ನೀಡುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಇನ್ನೊಬ್ಬರ ಭಾವನೆಗಳನ್ನು ಕದಡಬೇಡಿ. ಎಲ್ಲರನ್ನು ಗೌರವಿಸಿ ಎಂದು ಕೇಳಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article