-->
ಚಿಲಿಯ 'ಯಮನ' ಭಾಷೆ ಬಲ್ಲ ಏಕೈಕ ಮಹಿಳೆ ನಿಧನ: ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದೇ ಭಾಷೆಯೊಂದು ಅಂತ್ಯ

ಚಿಲಿಯ 'ಯಮನ' ಭಾಷೆ ಬಲ್ಲ ಏಕೈಕ ಮಹಿಳೆ ನಿಧನ: ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದೇ ಭಾಷೆಯೊಂದು ಅಂತ್ಯ


ಚಿಲಿ: ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ ಚಿಲಿ ದೇಶದಲ್ಲಿ ಇದೇ ದಿನವಾದ ಇಂದು ಯಮನ ಎಂಬ ಭಾಷೆ ತಿಳಿದ ಏಕೈಕ ಮಹಿಳೆಯೊಬ್ಬರು ನಿಧನರಾಗಿದ್ದಾರೆ. ಕ್ರಿಸ್ಟೀನಾ ಕಲ್ಡೇರಾನ್(93) ಎಂಬ ಈ ಮಹಿಳೆ ಯಾಗನ್ ಸಮುದಾಯದ ಯಮನ ಭಾಷೆಯನ್ನು ಬಲ್ಲವರಾಗಿದ್ದರು. 

ದುರಾದೃಷ್ಟವೆಂದರೆ ಇವರನ್ನು ಬಿಟ್ಟರೆ ಯಾಗನ್‌ ಸಮುದಾಯದ ಮಾತೃಭಾಷೆ ಯಮನವನ್ನು ಬಲ್ಲವರು ಯಾರೂ ಇಲ್ಲವೆನ್ನಲಾಗುತ್ತದೆ. 2003ರಲ್ಲಿ ಮೃತಪಟ್ಟ ಇವರ ಸಹೋದರಿ ಹಾಗೂ ಕ್ರಿಸ್ಟೀನಾ ಕಲ್ಡೇರಾನ್ ರನ್ನು ಬಿಟ್ಟರೆ ಈ ಭಾಷೆಯನ್ನು ಬಲ್ಲವರು ಬೇರೆ ಯಾರೂ ಇಲ್ಲ ಎನ್ನಲಾಗಿದೆ. 

ಇದೀಗ ಕ್ರಿಸ್ಟೀನಾ ಸಾವಿನೊಂದಿಗೆ ಪುರಾತನ ಭಾಷೆಯೊಂದು ಸಂಪೂರ್ಣ ಮೃತಪಟ್ಟಿದೆ. ಯಮನ ದಕ್ಷಿಣ ಅಮೆರಿಕಾದ ಚಿಲಿ ದೇಶಕ್ಕೆ ಸಂಬಂಧಿಸಿದ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಅರ್ಜೆಂಟೀನಾ ಮತ್ತು ಚಿಲಿಯ ನಡುವಿನ ಟಿಯೆರಾ ಡೆಲ್ ಫ್ಯೂಗೊ ಎಂಬ ದ್ವೀಪದಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳು ಯಮನ ಭಾಷೆಯನ್ನು ಮಾತನಾಡುತ್ತಿದ್ದರು.

 ಇವರು ತಮ್ಮ ಭಾಷೆಯನ್ನು ಉಳಿಸುವುದಕ್ಕಾಗಿ ಸ್ಪ್ಯಾನಿಷ್ ಭಾಷೆಯಲ್ಲಿ ಅನುವಾದಗಳೊಂದಿಗೆ ನಿಘಂಟನ್ನು ಸಿದ್ಧಪಡಿಸಿದ್ದಾರೆ. ಆದರೆ ಈ ಬಗ್ಗೆ ಯಾರೂ ಉತ್ಸಾಹ ತೋರಿದಂತಿಲ್ಲ. ಆದ್ದರಿಂದ ಇದುವರೆಗೆ ಯಾರೂ ಈ ಭಾಷೆಯನ್ನು ಕಲಿತಿಲ್ಲ. ಮುಂದಿನ ದಿನಗಳಲ್ಲಿ ಯಾರಾದರೂ ಈ‌ ಬಗ್ಗೆ ಆಸಕ್ತಿ ವಹಿಸಿದ್ದಲ್ಲಿ ಮಾತ್ರ ಮತ್ತೊಮ್ಮೆ ಯಮನ ಭಾಷೆಯ ಉದಯ ಆಗಲಿದೆ. ಕ್ರಿಸ್ಟೀನಾ ಅವರಿಗೆ ಮಗಳಿದ್ದು, ಅವರು ಕೂಡ ಯಮನ ಭಾಷೆ ಕಲಿತಿಲ್ಲ. ಈ ಬಗ್ಗೆ ಮಾತನಾಡಿರುವ ಅವರು, ಯಗನ್ ಸಮುದಾಯದ ಹೊಸ ತಲೆಮಾರುಗಳು ಯಮನ ಭಾಷೆಯನ್ನು ಕಲಿಯುವುದನ್ನು ನಿಲ್ಲಿಸಿದ್ದಾರೆ. ಏಕೆಂದರೆ ಆ ಭಾಷೆ ಅತ್ಯಂತ ಕಷ್ಟಕರವಾಗಿದೆ ಮತ್ತು ಅದರ ಪದಗಳ ಮೂಲವನ್ನು ನಿರ್ಧರಿಸುವುದು ಕಷ್ಟವಾಗಿದೆ ಎಂದಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100