-->
ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾದ ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್: ಮಾದಕ ಫೋಟೋ ಹಂಚಿದ ನಟಿ

ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾದ ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್: ಮಾದಕ ಫೋಟೋ ಹಂಚಿದ ನಟಿ

ಕೊಚ್ಚಿ: ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್​ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಭಾರೀ ಬೇಡಿಕೆಯ ನಟಿಯಾಗಿದ್ದ ಜಾಸ್ಮಿನ್​ ಕೆಲ ಸಮಯಗಳಿಂದ ಕಣ್ಮರೆಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರು ಎಲ್ಲೂ ಕಾಣುವುದಿಲ್ಲ. ಜಾಸ್ಮಿನ್​ ಎಲ್ಲಿ ಹೋಗಿದ್ದಾರೆಂದು  ಬಹುತೇಕರು ಹುಡುಕಾಟ ನಡೆಸುತ್ತಿದ್ದರು. ಮದುವೆಯ ಬಳಿಕ ಸಿನಿಮಾದಿಂದ ದೂರವಾಗಿದ್ದ ಜಾಸ್ಮಿನ್​ ಕೆಲ ದಿನಗಳ ಹಿಂದಷ್ಟೇ ಮತ್ತೊಮ್ಮೆ ಎಲ್ಲರೆದುರು ಬಂದಿದ್ದಾರೆ. 

ಹೌದು, ಮೀರಾ ಜಾಸ್ಮಿನ್​ ಜ.20ರಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ. ಅದೇ ರೀತಿ ಅಭಿಮಾನಿಗಳೊಂದಿಗೆ ತಾವು ಇನ್ನು ಮುಂದೆ ನಿರಂತರವಾಗಿ ಸಂಪರ್ಕದಲ್ಲಿ ಇರಲಿದ್ದೇನೆ ಎಂದಿದ್ದಾರೆ. ಇದುವರೆಗೂ ಜಾಲತಾಣದಿಂದ ಮತ್ತು ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ಜಾಸ್ಮಿನ್​ ಇದೀಗ ಜಾಲತಾಣಗಳಲ್ಲಿ ಪತ್ತೆಯಾಗಿರುವುದು ಅಭಿಮಾನಿಗಳಿಗೆ ಭಾರೀ ಖುಷಿ ತರಿಸಿದೆ. ಹಿಂದೊಮ್ಮೆ ಜಾಸ್ಮಿನ್​ ಶಾಪಿಂಗ್​ ಮಾಡುವ ವೇಳೆ ದಿಢೀರ್​ ಪ್ರತ್ಯಕ್ಷರಾಗಿದ್ದರು. ಆ ವೇಳೆ ಅವರು ತುಂಬಾ ದಪ್ಪವಾಗಿದ್ದರು. ಇದೀಗ ಸ್ಲಿಮ್​ ಆಗಿ ಕಾಣುತ್ತಿರುವ ಜಾಸ್ಮಿನ್​ ಮತ್ತೆ ತಮ್ಮ ಮಾದಕ ಫೋಟೋಗಳ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಕಪ್ಪು ಬಣ್ಣದ ಜಾಕೆಟ್​ ಧರಿಸಿರುವ ಜಾಸ್ಮಿನ್​ ಬ್ರಾ ಧರಿಸಿ ಎದೆ ಸೀಳು ಕಾಣುವಂತೆ ಕ್ಯಾಮೆರಾಗೆ ಪೋಸ್​​ ನೀಡಿದ್ದಾರೆ. ಈ ಫೋಟೋಗೆ 70 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿದ್ದು, ಜಾಸ್ಮಿನ್​ ಬೋಲ್ಡ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.  


ಮೀರಾ ಜಾಸ್ಮಿನ್​ ಇನ್​ಸ್ಟಾಗ್ರಾಂ ಖಾತೆ ತೆರೆದ ಮೊದಲ ದಿನವೇ ಅವರು 1 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಅನ್ನು ಪಡೆದಿದ್ದಾರೆ. ಇದೀಗ ಫಾಲೋವರ್ಸ್​ ಸಂಖ್ಯೆ 2 ಲಕ್ಷ ದಾಟಿದೆ. ಅಂದಹಾಗೆ ಜಾಸ್ಮಿನ್​ ಅವರು 2014ರಲ್ಲಿ ಅನಿಲ್​ ಜಾನ್​ ಟಿಟನ್​ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಪತಿ ದುಬೈನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲೇ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡರು. ವಿವಾಹವಾದ ಬಳಿಕ ಮಾನಸಿಕ ಸಮಸ್ಯೆಯಿಂದ ಜಾಸ್ಮಿನ್​ ತಮ್ಮ ಪತಿಯಿಂದ ದೂರವಾಗಿದ್ದಾರೆ. 

ಮತ್ತೆ ಸಿನಿಮಾ ಕಡೆ ಒಲವು ತೋರಿಸಿರುವ ಜಾಸ್ಮಿನ್​ ಇತ್ತೀಚೆಗಷ್ಟೇ ಮಲಯಾಳಂ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಆಫರ್​ಗಳು ಬಂದರೆ ಎಲ್ಲಾ ಭಾಷೆಗಳಲ್ಲೂ ನಟಿಸುವುದಾಗಿ ಹೇಳಿಕೊಂಡಿದ್ದಾರೆ. ಜಾಸ್ಮಿನ್​ ಕನ್ನಡಿಗರಿಗೂ ಚಿರಪರಿಚಿತರು. ಏಕೆಂದರೆ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ದಿವಂಗತ ನಟ ಪುನೀತ್​ ಜತೆ ಮೌರ್ಯ ಮತ್ತು ಅರಸು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಶಿವಣ್ಣನ ಜತೆ ದೇವರ ಕೊಟ್ಟ ತಂಗಿ ಹಾಗೂ ರವಿಚಂದ್ರನ್​ ಜತೆ ಹೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನದಲ್ಲೂ ಜಾಸ್ಮಿನ್​ ಮನೆ ಮಾಡಿದ್ದು, ಅವರ ಮುಂದಿನ ಪಯಣ ಸುಗಮವಾಗಿರಲಿ. 

Ads on article

Advertise in articles 1

advertising articles 2

Advertise under the article