-->

ಯುವತಿಯರಿಬ್ಬರನ್ನು ಸಲಿಂಗ ದಂಪತಿಯೆಂದು ಬಿಂಬಿಸಿದ ರೀಲ್ಸ್ ಎಡವಟ್ಟು: ಆಂಧ್ರಪ್ರದೇಶದಲ್ಲೊಂದು ವಿವಾದದ ಕಿಡಿ

ಯುವತಿಯರಿಬ್ಬರನ್ನು ಸಲಿಂಗ ದಂಪತಿಯೆಂದು ಬಿಂಬಿಸಿದ ರೀಲ್ಸ್ ಎಡವಟ್ಟು: ಆಂಧ್ರಪ್ರದೇಶದಲ್ಲೊಂದು ವಿವಾದದ ಕಿಡಿ

ವಿಜಯವಾಡ: ಯುವತಿಯರಿಬ್ಬರ ಒಂದೇ ಮನೆಯ ವಾಸವು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಪಟ್ಟಣದಲ್ಲಿ ಭಾರೀ ವಿವಾದವೊಂದನ್ನು ಹುಟ್ಟುಹಾಕಿದೆ. ಓರ್ವ ಯುವತಿಯ ತಾಯಿ ಒಂಗೋಲ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಈ ತಾಯಿ ನೀಡಿರುವ ದೂರಿನ ಪ್ರಕಾರ ಆಕೆಯ ಪುತ್ರಿ, ಮತ್ತೊಬ್ಬ ಯುವತಿಯೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಾಳೆ. ಇವರಿಬ್ಬರೂ ಲಿವಿಂಗ್​ ಟುಗೆದರ್ ರಿಲೇಶನ್​ಶಿಪ್​ನಲ್ಲಿದ್ದಾರೆ. ಅಲ್ಲದೆ, ಅವಬ್ಬರು ವಿವಾಹವಾಗುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ  ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ತಮ್ಮ ಮೇಲಿನ ಲಿವಿಂಗ್ ​ಟುಗೆದರ್ ರಿಲೇಶನ್​ಶಿಪ್ ಆರೋಪವನ್ನು ಅಲ್ಲಗೆಳೆದಿರುವ ಯುವತಿಯರು, ತಾವಿಬ್ಬರು ಸಹೋದರಿಯರಂತೆ ಜೊತೆಯಾಗಿ ಇದ್ದೇವೆ ಎಂದು ಹೇಳಿದ್ದಾರೆ. ಇದರಲ್ಲಿನ ಓರ್ವ ಯುವತಿಯನ್ನು ಆಕೆಯ ವಿರೋಧದ ಮಧ್ಯೆಯೇ ಅವಳ ಅಂಕಲ್​ ಜೊತೆ ವಿವಾಹ ಮಾಡಿಕೊಡಲು ಬಲವಂತ ಮಾಡಿರುವುಸಕ್ಕೆ ಮನೆ ಬಿಟ್ಟು ಬೇರೊಂದು ಯುವತಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು ಹೇಳಲಾಗಿದೆ.

ಆದರೆ ಈ ಯುವತಿಯರು ಮಾಡಿರುವ ರೀಲ್ಸ್​ ಒಂದು ಅವರನ್ನು ಸಲಿಂಗ ದಂಪತಿಗಳಂತೆ ಕಾಣುವಂತೆ ಮಾಡಿದೆ. ಇದನ್ನು ಕೇವಲ ಮೋಜಿಗಾಗಿ ಮಾತ್ರ ಮಾಡಲಾಗಿದೆ ಎಂದು ಇಬ್ಬರು ಸ್ಪಷ್ಟನೆಯನ್ನು ನೀಡಿದ್ದಾರೆ. ಯುವತಿಯೊಬ್ಬಳ ಮನೆಗೆಲಸದ ಮಹಿಳೆ ಇಬ್ಬರು ವಿವಾಹವಾಗಿದ್ದಾರೆ ಎಂದು ಹೇಳಿದ ಬಳಿಕ ಈ ವಿಚಾರ ಪಾಲಕರಿಗೆ ತಿಳಿದಿದೆ. ಮದುವೆ ವಿಷಯವನ್ನು ಇತರರಿಗೆ ಬಹಿರಂಗಪಡಿಸಿದರೆ ಭೀಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಯುವತಿ ಎಚ್ಚರಿಸಿದ್ದಾಳೆ ಎಂದು ಮನೆಗೆಲಸದವಳು ಹೇಳಿದ್ದಾಳೆ. ಸದ್ಯ ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article