-->
Job fair at Mangaluru- ಮಂಗಳೂರು: ಮಾರ್ಚ್ 3ರಂದು ಬೃಹತ್ ಉದ್ಯೋಗ ಮೇಳ

Job fair at Mangaluru- ಮಂಗಳೂರು: ಮಾರ್ಚ್ 3ರಂದು ಬೃಹತ್ ಉದ್ಯೋಗ ಮೇಳ

ಮಂಗಳೂರು: ಮಾರ್ಚ್ 3ರಂದು ಬೃಹತ್ ಉದ್ಯೋಗ ಮೇಳ


ಮಂಗಳೂರಿನಲ್ಲಿ ಮಾರ್ಚ್ 3ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಮಂಗಳೂರಿನ ಕೊಟ್ಟಾರ ಚೌಕಿ ರಾಷ್ಟ್ರೀಹೆದ್ದಾರಿಯಲ್ಲಿ ಇರುವ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಇದರ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅಭ್ಯರ್ಥಿಗಳು ಈ ಉದ್ಯೋಗ ಮೇಳದ ಪ್ರಯೋಜನ ಪಡೆಬಹುದಾಗಿದೆ.


ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಇದರ ನೇತೃತ್ವದಲ್ಲಿ ಈ ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಸುಮಾರು 100ಕ್ಕೂ ಅಧಿಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಇದರಲ್ಲಿ 5000ಕ್ಕೂ ಹೆಚ್ಚು ಉದ್ಯೋಗವಕಾಶಗಳ ಲಭ್ಯತೆ ಇರಲಿದೆ.ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಈ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸೂಕ್ತ ಉದ್ಯೋಗಕ್ಕೆ ತಮ್ಮ ನೊಂದಣಿಯನ್ನು ಸಲ್ಲಿಸಬಹುದಾಗಿದೆ.ಒಬ್ಬ ಅಭ್ಯರ್ಥಿಗೆ ಮೂರು ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸುವ ಅವಕಾಶ ಇದೆ.ತರಬೇಕಾದ ಅಗತ್ಯ ದಾಖಲೆಗಳು:

ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ನಕಲು ಪ್ರತಿ ಪಾಸ್ಪೋರ್ಟ್ ಗಾತ್ರದ ಫೋಟೋ, ಆಧಾರ್ ಕಾರ್ಡ್ ಮತ್ತು ಸ್ವ-ವಿವರ ಇರುವ ಅರ್ಜಿಯ ಜೊತೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆಇದಲ್ಲದೆ, ಈ ಕೆಳಗಿನ ಇಮೇಲ್ ವಿಳಾಸಕ್ಕೆ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಯನ್ನು ಸಂಪರ್ಕ ಮಾಡಬಹುದು

Phone: +91 8277895931

Email: ksdc.recruitment@gmail.com

Website: https://skillconnect.kaushalkar.com/app/student-jobfair


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article