ಖಾಯಂ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ಯುವಕನ‌ ನಗ್ನಗೊಳಿಸಿ ಮಹಿಳೆಯೊಂದಿಗೆ ಮಲಗಿಸಿ ಬ್ಲ್ಯಾಕ್ ಮೇಲ್: ಮೂವರು ಅರೆಸ್ಟ್

ಶಿರಸಿ (ಉತ್ತರ ಕನ್ನಡ): ಹನಿಟ್ರ್ಯಾಪ್ ಮಾಡಿ ಯುವಕನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿರುವ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪೊಲೀಸರು ಬಂಧಿಸಿದ್ದಾರೆ. 

ಅಜಿತ್ ಶ್ರೀಕಾಂತ ನಾಡಿಗ್ (25), ಧನುಷ್ಯ ದಿಲೀಪ್ ಕುಮಾರ್ ಶೆಟ್ಟಿ ಶಿರಸಿ (25) ಹಾಗೂ ಪದ್ಮಜಾ ಡಿ.ಎನ್. ಶಿವಮೊಗ್ಗ (50) ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ‌ ಸಾಗರ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳು ಖಾಯಂ ಉಪನ್ಯಾಸಕ ಹುದ್ದೆಯನ್ನು ಕೊಡಿಸೋದಾಗಿ ಯುವಕನೋರ್ವನನ್ನು ಶಿವಮೊಗ್ಗಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಕೋಣೆಯೊಂದರಲ್ಲಿ ನಗ್ನಗೊಳಿಸಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವೀಡಿಯೋ ಚಿತ್ರಿಕರಿಸಿ ಬ್ಲ್ಯಾಕ್ ಮೇಲ್ ಮಾಡಿದ್ದರು. 

ಬಳಿಕ ವೀಡಿಯೋವನ್ನು ತೋರಿಸಿ 15 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು. ಹಣ ನೀಡದಿದ್ದರೇ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. 

ಇದೋಗ ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ.
BREAKING NEWS
Loading latest news...
Join our WhatsApp Channel Powered By : Online Pudu