-->

ನೆರೆಮನೆಯಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿ ಕೆಲಸ ಕಳೆದುಕೊಂಡಿದ್ದ ಪೊಲೀಸ್ ಕಾನ್ ಸ್ಟೇಬಲ್ ನೆರವಿಗೆ ಬಂದ ಗುಜರಾತ್ ಹೈಕೋರ್ಟ್!

ನೆರೆಮನೆಯಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿ ಕೆಲಸ ಕಳೆದುಕೊಂಡಿದ್ದ ಪೊಲೀಸ್ ಕಾನ್ ಸ್ಟೇಬಲ್ ನೆರವಿಗೆ ಬಂದ ಗುಜರಾತ್ ಹೈಕೋರ್ಟ್!

ಅಹಮದಾಬಾದ್‌: ನೆರೆಮನೆಯ ವಿಧವೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್‌ ಕಾನ್ ಸ್ಟೇಬಲ್ ಪತ್ನಿ ನೀಡಿರುವ ದೂರಿನಿಂದ ಕೆಲಸ ಕಳೆದುಕೊಂಡಿದ್ದ. ಇದೀಗ ಈತನ ನೆರವಿಗೆ ಗುಜರಾತ್‌ ಹೈಕೋರ್ಟ್‌ ಧಾವಿಸಿದೆ.

ಕೆಲಸ ಕಳೆದುಕೊಂಡಿದ್ದ ಕಾನ್ ಸ್ಟೇಬಲ್ ತನ್ನ ಪತ್ನಿಯೊಂದಿಗೆ ಶಾಹಿಬಾಗ್ ಪ್ರದೇಶದ ಪೊಲೀಸ್ ವಸತಿ ನಿಲಯದಲ್ಲಿ ವಾಸವಾಗಿದ್ದ. ಆದರೆ ಈತ ನೆರೆಮನೆಯ ವಿಧವೆಯೊಂದಿಗೆ ಸಂಬಂಧ ಹೊಂದಿದ್ದ. ಇದು ಆತನ ಪತ್ನಿಗೆ ತಿಳಿದು ಆಕೆ ರೆಡ್‌ಹ್ಯಾಂಡ್ ಆಗಿ ಪತಿಯನ್ನು ಹಿಡಿಯಲು ಆತನಿಗೆ ಅರಿವಿಲ್ಲದಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಳು.

ಆ ಬಳಿಕ‌ ಕಾನ್ ಸ್ಟೇಬಲ್ ವಿಧವೆಯ ಮನೆಗೆ ಹೋದ ಸಂದರ್ಭ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಳು. ಅಲ್ಲದೆ ‌ಈತನ ಅಕ್ರಮ ಸಂಬಂಧದ ಕುರಿತು ಪತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಳು. ಪೊಲೀಸರು ವಿಧವೆ ಹಾಗೂ ಕಾನ್ ಸ್ಟೇಬಲ್ ರನ್ನು ಕರೆಸಿ ಮಾತನಾಡಿದ ಸಂದರ್ಭ ಇಬ್ಬರೂ ಸಂಬಂಧ ಇರುವುದನ್ನು ಒಪ್ಪಿಕೊಂಡಿದ್ದರು. 

ಈ ಹಿನ್ನೆಲೆಯಲ್ಲಿ 2013ರಲ್ಲಿ ಪೊಲೀಸ್ ಇಲಾಖೆಯು ಕಾನ್ ಸ್ಟೇಬಲ್ ನನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು. ಪೊಲೀಸರು ಮಹಿಳೆಯರು, ಮಕ್ಕಳು ಹಾಗೂ ಹಿರಿಯರಿಗೆ ಸುರಕ್ಷತೆ ಒದಗಿಸಬೇಕು. ಅದನ್ನು ಬಿಟ್ಟು ಸ್ವಂತ ಕುಟುಂಬಕ್ಕೆ ರಕ್ಷಣೆ ಕೊಡದೇ ಹೀಗೆ ಅಕ್ರಮ ಸಂಬಂಧ ಹೊಂದುವುದು ಪೊಲೀಸ್ ನಡೆಯ ಉಲ್ಲಂಘನೆಯಾಗಿದೆ ಎಂದು ಕಾರಣ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕಾನ್ ಸ್ಟೇಬಲ್ ಹೈಕೋರ್ಟ್‌ ಮೊರೆ ಹೋಗಿದ್ದರು. 

ಪ್ರಕರಣವನ್ನು ಕೈಗೆತ್ತಿಕೊಂಡ ಗುಜರಾತ್ ಹೈಕೋರ್ಟ್ ವಾದವನ್ನು ಪರಿಶೀಲನೆ ನಡೆಸಿ ತೀರ್ಪು ನೀಡಿದೆ. ಯಾವುದೇ ವ್ಯಕ್ತಿಯು ಅಕ್ರಮ ಸಂಬಂಧ ಹೊಂದುವುದು ಅನೈತಿಕವೆಂದು ಪರಿಗಣಿಸಿದರೂ ಇದು ಪೊಲೀಸ್ ದುರ್ವರ್ತನೆ ಎಂದು ಪರಿಗಣಿಸಲಾಗದು. ವಿವಾಹೇತರ ಸಂಬಂಧ ಸಮಾಜದ ದೃಷ್ಟಿಯಿಂದ ಅನೈತಿಕ ನಿಜ, ಆದರೆ ಇದು ಕರ್ತವ್ಯದಿಂದ ವಜಾ ಮಾಡಲು ಕಾರಣವಾಗಲಾರದು. ವಿವಾಹೇತರ ಸಂಬಂಧ ಹೊಂದಿರುವುದಕ್ಕೂ ಕರ್ತವ್ಯದಿಂದ ವಜಾ ಮಾಡುವುದಕ್ಕೂ ಸಂಬಂಧವಿಲ್ಲ. ಆದ್ದರಿಂದ ಕಾನ್ಸ್‌ಟೆಬಲ್‌ ಅವರನ್ನು ವಜಾ ಮಾಡಿದ್ದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದ್ದರಿಂದ ಅವರನ್ನು ವಾಪಸ್‌ ಕರ್ತವ್ಯಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.  ಈ ಮೂಲಕ ಒಂಬತ್ತು ವರ್ಷಗಳವರೆಗೆ ಕೋರ್ಟ್‌ ಅಲೆದಾಡಿದ ಕಾನ್ಸ್‌ಟೆಬಲ್‌ಗೆ ಈಗ ಜಯ ಸಿಕ್ಕಿದೆ.

Ads on article

Advertise in articles 1

advertising articles 2

Advertise under the article