ದೇಹ ಪ್ರದರ್ಶನ ಮಾಡಿದಷ್ಟಕ್ಕೇ ಕೆಟ್ಟ ಸಿನಿಮಾ ಉಳಿಯೋಲ್ಲ: ದೀಪಿಕಾ ಪಡುಕೋಣೆ ಅಭಿನಯದ ಗೆಹ್ರಿಯಾನ್ ಸಿನಿಮಾ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕಂಗನಾ

ಮುಂಬೈ: ಇತ್ತೀಚೆಗಷ್ಟೇ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿರುವ ನಟಿ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್ ಚತುರ್ವೇದಿ ಅಭಿನಯದ “ಗೆಹ್ರಿಯಾನ್” ಸಿನಿಮಾ ವಿರುದ್ಧ ನಟಿ ಕಂಗನಾ ರಣಾವತ್​ ವಾಗ್ದಾಳಿ ನಡೆಸಿದ್ದಾರೆ.

1965ರಲ್ಲಿ ಬಿಡುಗಡೆಯಾದ ಬಾಲಿವುಡ್​ನ “ಹಿಮಾಲಯ ಕಿ ಗಾಡ್​ ಮ್ಯಾನ್​” ಸಿನಿಮಾ ವೀಡಿಯೋ ತುಣುಕೊಂದನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ​ ಶೇರ್​ ಮಾಡಿಕೊಂಡಿರುವ ಕಂಗನಾ, 'ನಾನು ಸಹ ಸಹಸ್ರಮಾನದವಳು. ಆದರೆ  ಇಂತಹ ಪ್ರಣಯವನ್ನು ಖಂಡಿತಾ ಗುರುತಿಸುತ್ತೇನೆ ಹಾಗೂ ಅರ್ಥಮಾಡಿಕೊಳ್ಳುತ್ತೇನೆ. ಆದರೆ ಇದೀಗ ಹೊಸ ಯುಗದ ಹೆಸರಿನಲ್ಲಿ ನಗರದ ಸಿನಿಮಾಗಳು ದಯವಿಟ್ಟು ಕಸವನ್ನು ಮಾರಾಟ ಮಾಡಬಾರದು. ಕೆಟ್ಟ ಸಿನಿಮಾವೊಂದು ಕೆಟ್ಟ ಸಿನಿಮಾವೇ ಹೊರತು ಚರ್ಮ ಪ್ರದರ್ಶನ ಅಥವಾ ಅಶ್ಲೀಲ ಪ್ರದರ್ಶನ ಆ ಸಿನಿಮಾವನ್ನು ಕಾಪಾಡುವುದಿಲ್ಲ ಎಂದು ಸಾಮಾನ್ಯ ಸಂಗತಿ ಎಂದು ಕಂಗನಾ ಸಿನಿಮಾ ಕುರಿತು ಖಾರವಾಗಿ ಟೀಕಿಸಿದ್ದಾರೆ. 

ಅಂದ ಹಾಗೆ ಗೆಹ್ರಿಯಾನ್ ಸಿನಿಮಾ ಫೆಬ್ರವರಿ 11 ರಂದು ಒಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿದೆ. ಸಿನಿಮಾದ ಬಹುತೇಕ ಭಾಗಗಳಲ್ಲಿ ದೀಪಿಕಾ ಹಾಗೂ ಸಿದ್ಧಾಂತ್ ಚತುರ್ವೇದಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆಜಾನ್​ನಲ್ಲಿ ಈ ಸಿನಿಮಾ ಭಾರೀ ಸದ್ದು ಮಾಡಿದ್ದು, ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.