-->
ಮಂಗಳೂರು: ಮೀನುಗಾರರ ಬಲೆಗೆ ಬಿತ್ತು ಹಾರುವ ಅಪರೂಪದ ಮೀನುಗಳು

ಮಂಗಳೂರು: ಮೀನುಗಾರರ ಬಲೆಗೆ ಬಿತ್ತು ಹಾರುವ ಅಪರೂಪದ ಮೀನುಗಳು

ಮಂಗಳೂರು: ನಗರದ ದಕ್ಕೆಯಲ್ಲಿ ಮೀನು ಹಿಡಿಯಲೆಂದು ಹೋಗಿರುವ ಮೀನುಗಾರರ ಬಲೆಗೆ ಹಾರಾಡುವ ಮೀನುಗಳೆರಡು ದೊರಕಿದೆ. ಬೋಟ್ ಮೂಲಕ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಈ ಹಾರಾಡುವ ಮೀನುಗಳು ಪತ್ತೆಯಾಗಿವೆ
ಇಂಗ್ಲಿಷ್ ಭಾಷೆಯಲ್ಲಿ ಫ್ಲೆಯಿಂಗ್​ ಫಿಶ್​ ಹಾಗೂ ತುಳು ಭಾಷೆಯಲ್ಲಿ ಪಕ್ಕಿಮೀನ್​ ಎಂದು ಕರೆಯಲ್ಪಡುವ ಈ ಹಾರಾಡುವ ಮೀನುಗಳು ಹೆಚ್ಚಾಗಿ ಆಳಸಮುದ್ರದಲ್ಲಿ ಇರುವ ಮತ್ಸ್ಯ ಪ್ರಭೇದವಾಗಿದೆ. ಈ ಹಾರಾಡುವ ಮೀನುಗಳಿಗೆ ಹಕ್ಕಿಗಳಂತೆಯೇ ರೆಕ್ಕೆಗಳಿರುತ್ತವೆ. ತಮ್ಮ ರೆಕ್ಕೆ ಹಾಗೂ ದೇಹದಲ್ಲಿರುವ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲಕ್ಕೆ ಎಗರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರಾಡುವ ಸಾಮರ್ಥ್ಯವನ್ನು ಈ ಮೀನುಗಳು ಹೊಂದಿವೆ.


15ರಿಂದ 45 ಸೆಂ.ಮೀ.ವರೆಗೆ ಉದ್ದ ಬೆಳೆಯುವ ಈ ಮೀನುಗಳು ಮೀನುಗಾರರ ಬಲೆಗೆ ಬಿದ್ದಿರುವುದೇ ಬಹಳ ವಿಚಿತ್ರ ಸಂಗತಿ. ಇತರ ಮೀನುಗಳಿಗೆ ಹೋಲಿಸಿದಲ್ಲಿ ಹಾರಾಡುವ ಮೀನುಗಳು ಹೆಚ್ಚು ರುಚಿಕರವಾಗಿರುತ್ತದೆ. ಆದರೆ, ಈ ಮೀನುಗಳನ್ನು ಹಿಡಿಯುವ ವಿಧಾನ ಮಾತ್ರ ಕರಾವಳಿ ಭಾಗದ ಮೀನುಗಾರರಿಗೆ ತಿಳಿದಿಲ್ಲ ಎಂದು ಮೀನುಗಾರ ಲೋಕೇಶ್​ ಬೆಂಗ್ರೆ ಹೇಳುತ್ತಾರೆ.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242