-->
ಸಮಯವಿದ್ದಾಗ ಕರೆ ಮಾಡಿ ಎಂದು ನಟಿಗೆ ಫೋನ್ ನಂಬರ್ ಕೊಟ್ಟು ಪೇಚಿಗೆ ಸಿಲುಕಿದ ನೆಟ್ಟಿಗ

ಸಮಯವಿದ್ದಾಗ ಕರೆ ಮಾಡಿ ಎಂದು ನಟಿಗೆ ಫೋನ್ ನಂಬರ್ ಕೊಟ್ಟು ಪೇಚಿಗೆ ಸಿಲುಕಿದ ನೆಟ್ಟಿಗ

ಹೈದರಾಬಾದ್​: 'ಚಲ್​ ಮೋಹನ್​ ರಂಗ' ಸಿನಿಮಾದೊಂದಿಗೆ ಟಾಲಿವುಡ್​ನಲ್ಲಿ ಸಿನಿ ಜರ್ನಿ ಪ್ರಾರಂಭಿಸಿರುವ ಗ್ಲಾಮರ್​ ಬ್ಯೂಟಿ ಆಶು ರೆಡ್ಡಿ, ಬಿಗ್​ಬಾಸ್​ ಸಿಸನ್​- 3ರಲ್ಲಿ ಭಾಗವಹಿಸುವ ಮೂಲಕ ಭಾರೀ ಖ್ಯಾತಿ ಪಡೆದಿದ್ದರು. ನೋಡಲು ಕೊಂಚ ಸಮಂತಾರನ್ನೇ ಹೋಲುವ ಕಾರಣ ಆಶು ರೆಡ್ಡಿಯನ್ನು ಜೂನಿಯರ್​ ಸಮಂತಾ ಎಂದೇ ಕರೆಯಲಾಗುತ್ತದೆ. 

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಆಶು ರೆಡ್ಡಿ, ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಈ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅಲ್ಲದೆ, ಅಭಿಮಾನಿಗಳು ಅಥವಾ ನೆಟ್ಟಿಗರೊಂದಿಗೆ ಆಗಾಗ ಇನ್​ಸ್ಟಾಗ್ರಾಂ ಲೈವ್​ ಸೆಷೆನ್ಸ್​ ಕೂಡ ನಡೆಸುತ್ತಿರುತ್ತಾರೆ. ಸಾಮಾನ್ಯವಾಗಿ ಲೈವ್​ ಸೆಷೆನ್ಸ್​ ಸಂದರ್ಭ ಅಭಿಮಾನಿಗಳು ಕೇಳುವುದು ಸಹಜ. 

ಕೆಲವೊಮ್ಮೆ ನೆಟ್ಟಿಗರು, ಅಭಿಮಾನಿಗಳು ಅಸಭ್ಯ ಪ್ರಶ್ನೆಗಳನ್ನು ಕೇಳಿ ನಟಿಯರನ್ನು ಮುಜುಗರಕ್ಕೀಡು ಮಾಡುತ್ತಾರೆ. ಕೆಲ ನಟಿಯರು ಏನೇ ಪ್ರಶ್ನೆ ಕೇಳಿದರೂ ಬೋಲ್ಡ್​ ಆಗಿಯೇ ಉತ್ತರ ಕೊಡುತ್ತಾರೆ. ಸಾಮಾನ್ಯವಾಗಿ ಫೋನ್​ ನಂಬರ್ ಕೊಡುವಂತೆ ನಟಿಯರನ್ನು ಅಭಿಮಾನಿಗಳು ಕೇಳುವುದನ್ನು ನೋಡುತ್ತಲೇ ಇರುತ್ತೇವೆ. ಆದರೆ ನೆಟ್ಟಿಗನೊಬ್ಬ ತನ್ನ ಫೋನ್ ನಂಬರ್​ ನೀಡಿ, 'ಅಕ್ಕ ನಾನು ನಿಮ್ಮ ಜತೆ ಮಾತನಾಡಬೇಕು, ಸಮಯ ಸಿಕ್ಕಾಗ ಕರೆ ಮಾಡಿ' ಎಂದು ಹೇಳಿ ತನ್ನ ಮೊಬೈಲ್​ ನಂಬರ್​ ಅನ್ನು ಕಾಮೆಂಟ್​ ಮಾಡಿದ್ದಾನೆ. ಆದರೆ, ಇದೀಗ ನೆಟ್ಟಿಗನ ಕಾಮೆಂಟ್​ ಆತನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

ಏನಾಯಿತೆಂದರೆ, ನಟಿ ಆಶು ರೆಡ್ಡಿ ನೆಟ್ಟಿಗನ ಫೋನ್ ನಂಬರ್​ ಅನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದಾದ ಬಳಿಕ ನೆಟ್ಟಿಗನಿಗೆ ಸಿಕ್ಕಾಪಟ್ಟೆ ಫೋನ್ ಕರೆಗಳು ಬರಲಾರಂಭಿಸಿದೆ. ಇದರಿಂದ ಬೇಸರಗೊಂಡಿರುವ ಈ ನೆಟ್ಟಿಗ ಆಶುರೆಡ್ಡಿಯಲ್ಲಿ 'ಅಕ್ಕ ಕರೆ ಮಾಡಿ ಮಾಡಿ ಸಾಯಿಸುತ್ತಿದ್ದಾರೆ. ದಯಮಾಡಿ ಪೋಸ್ಟ್​ ಡಿಲೀಟ್​ ಮಾಡಿ' ಅಕ್ಕ ಎಂದು ಗೊಗರೆದಿದ್ದಾನೆ. 

ಇದೀಗ ಎರಡೂ ಫೋಸ್ಟ್​ ಅನ್ನು ಒಟ್ಟಿಗೆ ಎಡಿಟ್​ ಮಾಡಿ ಆಶು ರೆಡ್ಡಿ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡು ನಗುತ್ತಿರುವ ಫೋಟೋ ಪೋಸ್ಟ್​ ಮಾಡಿದ್ದಾರೆ. ಇತ್ತ ಫೋನ್​ ನಂಬರ್​ ಕೊಟ್ಟ ನೆಟ್ಟಿಗನ ಸ್ಥಿತಿ ಇರಲಾಗದೇ ಇರುವೆ ಬಿಟ್ಟುಕೊಂಡಂತಾಗಿದೆ.

Ads on article

Advertise in articles 1

advertising articles 2

Advertise under the article