-->
OP - Pixel Banner ad
ಹೆಣ್ಣು ಮಗು ಮಾರಾಟ ಮಾಡಿದ ತಾಯಿ ಸಹಿತ 9ಮಂದಿ ಅರೆಸ್ಟ್

ಹೆಣ್ಣು ಮಗು ಮಾರಾಟ ಮಾಡಿದ ತಾಯಿ ಸಹಿತ 9ಮಂದಿ ಅರೆಸ್ಟ್

ಚೆನ್ನೈ: ಮಕ್ಕಳ ಮಾರಾಟ ಜಾಲಗಳ ಬಗ್ಗೆ ಸಾಕಷ್ಟು ವರ್ಷಗಳಿಂದ ದೂರುಗಳು ಕೇಳಿ ಬರುತ್ತಲೇ ಇದೆ.  ಮಕ್ಕಳನ್ನು ಅಪಹರಣ ಮಾಡಿ ಮಾರಾಟ ಮಾಡಲಾಗುತ್ತದೆ ಎಂಬ ವಿಚಾರ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಈ ಪ್ರಕರಣದಲ್ಲಿ ಸ್ವಂತ ತಾಯಿಯೇ ಪುತ್ರಿಯನ್ನು ಮಾರಾಟ ಮಾಡಿದ್ದಾಳೆ. ಇದೀಗ ಪೊಲೀಸರು ತಾಯಿ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. 

ಪ್ರಕರಣದಲ್ಲಿ ಪುಟ್ಟ ಮಗು ತಾಯಿ ಕಲೈಸೆಲ್ವಿ ಆಕೆಯ ಸಹಚರ ಕರುಪ್ಪುಸಾಮಿ, ಮಗುವನ್ನು ಖರೀದಿಸಿದ್ದ ದಂಪತಿ, ಏಜೆಂಟ್​​ಗಳಾದ ಮರಿಯಮ್ಮ, ಮಹೇಶ್ವರಿ ಹಾಗೂ ಇನ್ನು ಮೂವರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. 

ಸೇವಲ್​ಪಟ್ಟಿ ಎಂಬಲ್ಲಿನ ನಿವಾಸಿ ಕಲೈಸೆಲ್ವಿ ತನ್ನ ಪತಿ ಮೃತಪಟ್ಟ ಬಳಿಕ ಕರುಪ್ಪುಸಾಮಿ ಎಂಬಾತನ ಜತೆಗಿದ್ದಳು. ಇವರು ತಮಿಳುನಾಡು ವಿರುಧುನಗರ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವನ್ನು 2.3 ಲಕ್ಷ ರೂ.ಗೆ ಮಾರಿದ್ದರು. 

ಆದರೆ ಬುಧವಾರ ರಾತ್ರಿ ವಿರುಧನಗರ ಚೈಲ್ಡ್​ಲೈನ್​ಗೆ ಮಗುವಿನ ಮಾರಾಟವಾದ ಬಗ್ಗೆ ಅನಾಮಧೇಯ ಕರೆಯೊಂದು ಬಂದಿದಿ. ಚೈಲ್ಡ್​ಲೈನ್​ಗೆ ಸಂಬಂಧಪಟ್ಟವರು ಕಲೈಸೆಲ್ವಿ ನೆಲೆಸಿರುವ ಪ್ರದೇಶಕ್ಕೆ ಹೋಗಿ ವಿಚಾರಿಸಿದಾಗ ಮಗು ಮಾರಾಟವಾಗಿರುವುದು ದೃಢಪಟ್ಟಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಮದುವೆ ದಳ್ಳಾಳಿಗಳ ರೂಪದಲ್ಲಿ ಹಲವಾರು ಏಜೆಂಟ್​ಗಳು ಮಕ್ಕಳ ಮಾರಾಟದಲ್ಲಿ ತೊಡಗಿದ್ದು, ಇಂಥ ಪ್ರಕರಣಗಳು ಬಹಳಷ್ಟು ನಡೆಯುತ್ತಿದೆ ಎಂಬ ಶಂಕೆ ಮೂಡಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242