-->
ಇದು ವಯೋವೃದ್ಧರ ಪ್ರೇಮ್ ಕಹಾನಿ: 80ರ ತಾತ 84ರ ಅಜ್ಜಿಯೊಂದಿಗೆ ಓಡಿ ಹೋದ, ಸಿಕ್ಕಿ ಬಿದ್ದ ಬಳಿಕ ಏನಾಯ್ತು ಗೊತ್ತೇ?

ಇದು ವಯೋವೃದ್ಧರ ಪ್ರೇಮ್ ಕಹಾನಿ: 80ರ ತಾತ 84ರ ಅಜ್ಜಿಯೊಂದಿಗೆ ಓಡಿ ಹೋದ, ಸಿಕ್ಕಿ ಬಿದ್ದ ಬಳಿಕ ಏನಾಯ್ತು ಗೊತ್ತೇ?

ಆಸ್ಟ್ರೇಲಿಯಾ: ಪ್ರೀತಿ ಮಾಡಲು ಯಾವುದೇ ಕಾರಣಕ್ಕೂ ವಯಸ್ಸು ಅಡ್ಡಿಯಾಗೋಲ್ಲ ಎಂಬ ಮಾತಿಗೆ ಪುಷ್ಪಿ ನೀಡಲೆಂಬಂತೆ ಇಲ್ಲೊಂದು ವಿಭಿನ್ನ ಪ್ರೇಮ ಪ್ರಕರಣವೊಂದು ನಡೆದಿದೆ. 80 ವರ್ಷದ ತಾತನೋರ್ವನು ಹಾಗೂ 84 ವರ್ಷದ ಅಜ್ಜಿಯೊಂದಿಗೆ ಓಡಿ ಹೋಗಿ ಸಿಕ್ಕಿಬಿದ್ದಿದ್ದಾರೆ. ಅಸಲಿಗೆ ಈ ವಯೋವೃದ್ಧ ಜೋಡಿಯ ಕಥೆ ಏನು ನೋಡಿ… 

ಆಸ್ಟ್ರೇಲಿಯಾ ನಿವಾಸಿ ರಾಲ್ಫ್ ಗಿಬ್ಸ್(80) ಬಹಳ ವರ್ಷಗಳಿಂದಲೂ ಕರೋಲ್​ ಲಿಸ್ಲೆ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಆದರೆ ಯಾಕೋ ಇವರಿಬ್ಬರ ವಿವಾಹ ಮಾತ್ರ ಸಾಧ್ಯವಾಗಿರಲಿಲ್ಲ. ಈ ನಡುವೆ, ಲಿಸ್ಲೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆಕೆ ನಡೆಯಲೂ ಅಶಕ್ತರಾಗಿದ್ದರು. ಜ್ಞಾಪಕ ಶಕ್ತಿಯು ದುರ್ಬಲವಾಗಿತ್ತು. ಆಕೆಯನ್ನು ಮನೆಯವರು ನರ್ಸಿಂಗ್ ಹೋಮ್ ಸೆಂಟರ್‌ಗೆ ದಾಖಲು ಮಾಡಿದ್ದರು. 

ಈ ವಿಚಾರ ರಾಲ್ಫ್ ಗಿಬ್ಸ್​ಗೆ ತಿಳಿದಿದೆ. ತನ್ನ ಪ್ರೇಯಸಿ ಈ ರೀತಿಯ ತೊಂದರೆಗೆ ಸಿಲುಕಿರುವುದು ಅವರಿಗೆ ನೋಡಲು ಸಾಧ್ಯವಾಗಿರಲಿಲ್ಲ. ಅವರು ನರ್ಸಿಂಗ್ ಹೋಮ್ ಸೆಂಟರ್‌ಗೆ ಬಂದು ಪ್ರೇಯಸಿಯನ್ನು ಭೇಟಿಯಾಗಿದ್ದಾರೆ. ಆಕೆ ಕೂಡ ತನ್ನ ಪ್ರಿಯತಮನನ್ನು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಆದರೆ ನರ್ಸಿಂಗ್ ಹೋಮ್ ಸೆಂಟರ್‌ ನಿಯಮದ ಪ್ರಕಾರ ಅಲ್ಲಿಂದ ಹೊರಕ್ಕೆ ಹೋಗುವಂತಿರಲಿಲ್ಲ. ಅದಕ್ಕಾಗಿ ಪ್ಲ್ಯಾನ್​ ಮಾಡಿದ ಈ ಹಿರಿಯ ಜೀವ, ಅಲ್ಲಿಯವರ ಕಣ್ಣುತಪ್ಪಿಸಿ ಓಡಿ ಹೋಗಿದ್ದಾರೆ. ಕ್ವೀನ್​ಲ್ಯಾಂಡ್ ಕಡೆಗೆ ಇಬ್ಬರೂ ತಪ್ಪಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ನರ್ಸಿಂಗ್​‌ಹೋಮ್ ಸೆಂಟರ್​ನಿಂದ ದೂರು ದಾಖಲಾಗಿತ್ತು. ಪೊಲೀಸರು ಈ ಜೋಡಿಯನ್ನು ಹಿಡಿದೇಬಿಟ್ಟಿದ್ದಾರೆ. 

ಇದೀಗ ತಾತ ರಾಲ್ಫ್ ಗಿಬ್ಸ್​ ಮೇಕೆ ಅಪಹರಣದ ಆರೋಪದ ಮೇಲೆ ಏಳು ತಿಂಗಳ ಶಿಕ್ಷೆ ವಿಧಿಸಿದೆ. ಅಲ್ಲದೆ ಅಜ್ಜಿ - ತಾತ ಇಬ್ಬರಿಗೂ ಎರಡು ವರ್ಷಗಳ ಕಾಲ ಭೇಟಿಯಾಗಬಾರದೆಂದೂ ಕೋರ್ಟ್ ಹೇಳಿದೆ. ಆಕೆಯನ್ನು ಪುನಃ ನರ್ಸಿಂಗ್ ಹೋಮ್ ಸೆಂಟರ್‌ಗೆ ಕರೆದುಕೊಂಡು ಹೋಗಲಾಗಿದೆ. ಎಷ್ಟೋ ವರ್ಷಗಳ ಬಳಿಕ ಒಂದಾದ ಈ ಜೋಡಿ ಮತ್ತೆ ಬೇರೆ ಬೇರೆಯಾಗಿದ್ದು, ಪ್ರಿಯಕರ ಅಜ್ಜ ಈಗ ಈ ವಯಸ್ಸಿನಲ್ಲಿ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.

Ads on article

Advertise in articles 1

advertising articles 2

Advertise under the article