ತನಗೆ ವಿಚ್ಛೇದನವಾಗಿ 12 ವರ್ಷಗಳಾದರೂ ಮಹಿಳೆಗೆ ವಿಚಾರವೇ ಗೊತ್ತಿಲ್ಲ: ಪತಿ ಮಾಡಿದ ಮೋಸವೇನು ಗೊತ್ತೇ?

ವಾಷಿಂಗ್ಟನ್‌: ಪತಿಗೆ ತಾನು ವಿಚ್ಛೇದನ ನೀಡಿದ್ದೆನೆಂಬ ವಿಚಾರ 12 ವರ್ಷಗಳವರೆಗೆ ಪತ್ನಿಗೇ ಗೊತ್ತಿರದಿದ್ದ ಪ್ರಕರಣವೊಂದು ಅಮೆರಿಕಾದ ಬರ್ಕ್‌ಶೈರ್‌ ಎಂಬ ಪ್ರದೇಶದಲ್ಲಿ ನಡೆದಿದೆ.

ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ದಂಪತಿ ರಚ್‌ಪಾಲ್‌ ಹಾಗೂ ಕೇವಲ್‌ ರಾಂಧವ 1978ರಲ್ಲಿ ಬರ್ಕ್‌ಶೈರ್‌ನ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. 2009ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದಿದ್ದರು. ಅನಂತರವೂ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ದಂಪತಿಯಿಬ್ಬರೂ ಜೊತೆಯಾಗಿ ಪಾಲ್ಗೊಳ್ಳುತ್ತಿದ್ದರು. ಇದೀಗಗ ಕೌಟುಂಬಿಕ ನ್ಯಾಯಾಲಯ ಈ ದಂಪತಿಯ ವಿಚ್ಛೇದನವನ್ನೇ ವಜಾ ಮಾಡಿದೆ.

ಕೇವಲ್‌ ರಾಂಧವ ತನ್ನ ಪತ್ನಿ ರಚ್‌ಪಾಲ್‌ ಸಹಿಯನ್ನು ಯಾರಿಂದಲೋ ನಕಲಿ ಮಾಡಿಸಿ, ವಿಚ್ಛೇದನ ಪತ್ರದಲ್ಲಿ ಹಾಕಿದ್ದರು. ಹೀಗಾಗಿ ತನಗೆ ವಿಚ್ಛೇದನವಾಗಿರುವುದು ಸ್ವತಃ ರಚ್‌ಪಾಲ್‌ ಅವರಿಗೇ ಗೊತ್ತಿರಲಿಲ್ಲ. ಈ ಕಾರಣಕ್ಕಾಗಿ ಇದೀಗ ದಂಪತಿಯ ವಿಚ್ಛೇದನವನ್ನು ಅನ್ನು ರದ್ದುಗೊಳಿಸುತ್ತಿದ್ದೇವೆ ಎಂದು ನ್ಯಾಯಾಲಯ ಆದೇಶಿಸಿದೆ.

ವಾಸ್ತವದಲ್ಲಿ ಕೇವಾಲ್‌ ರಾಂಧವ ತನ್ನ ಪತ್ನಿಗೆ ತಿಳಿಯದಂತೆ 2011ರಲ್ಲಿ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು. ಅವರಿಗೆ ಒಂದು ಮಗುವೂ ಇದೆ. ರಾಂಧವರಿಗೆ ಬೇರೊಬ್ಬಳೊಂದಿಗೆ ಸ್ನೇಹವಿರುವುದು ರಚ್‌ಪಾಲ್‌ರಿಗೂ ತಿಳಿದಿತ್ತು. ಆದರೆ ಅವರಿಗೆ ವಿವಾಹವಾಗಿದ್ದು ಗೊತ್ತಿರಲಿಲ್ಲ. ಅಲ್ಲದೇ ಆತ ತಮ್ಮ ಸಹಿಯನ್ನು ಯಾರಿಂದಲೋ ನಕಲು ಮಾಡಿ ವಿಚ್ಛೇದನ ಪ್ರಕ್ರಿಯೆ ಮುಗಿಸಿದ್ದರು ಎಂಬ ವಿಚಾರವೂ ಅರಿವಿಗೆ ಗೊತ್ತಿರಲಿಲ್ಲ.