-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬೇಕಾಬಿಟ್ಟಿ ಸಂದೇಶಗಳನ್ನು ನಿಯಂತ್ರಿಸಲು ಗ್ರೂಪ್ ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸ್ಆ್ಯಪ್

ಬೇಕಾಬಿಟ್ಟಿ ಸಂದೇಶಗಳನ್ನು ನಿಯಂತ್ರಿಸಲು ಗ್ರೂಪ್ ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸ್ಆ್ಯಪ್

ನವದೆಹಲಿ: ಪ್ರಸಿದ್ಧ ಸಾಮಾಜಿಕ ಜಾಲತಾಣವಾದ ವಾಟ್ಸ್ಆ್ಯಪ್ ತನ್ನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಸುಗಮಗೊಳಿಸಲು ಹಾಗೂ ಜನಸ್ನೇಹಿಯನ್ನಾಗಿಸಲು ಪ್ರಯತ್ನ ಪಡುತ್ತಲೇ ಇರುತ್ತದೆ. ಈ ಮೂಲಕ ತನ್ನ ಗ್ರಾಹಕರಿಗೆ ಆಗಾಗ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಿರುತ್ತವೆ. ಇದೀಗ ಗ್ರೂಪ್ ಅಡ್ಮಿನ್ ಗಳಿಗೆ ವಾಟ್ಸ್ಆ್ಯಪ್ ಹೊಸ ಸವಲತ್ತೊಂದನ್ನು ನೀಡಿದೆ.

ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ ಗೆ ಆ ಗ್ರೂಪ್ ನಲ್ಲಿ ಬಂದಿರುವ ಯಾವುದೇ ಸಂದೇಶವನ್ನು ಅಳಿಸಿ ಹಾಕುವ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಲಿದೆ. ಗ್ರೂಪ್ ನಲ್ಲಿರುವ ಯಾವ ಸದಸ್ಯನೇ ಸಂದೇಶವನ್ನು ಕಳುಹಿಸಿರಲಿ, ಅದನ್ನು ಎಲ್ಲರಿಗೂ ಡಿಲೀಟ್ ಆಗುವಂತೆ (ಡಿಲೀಟ್ ಎವ್ರಿ ವನ್) ಅಡ್ಮಿನ್ ಗೆ ಅವಕಾಶ ನೀಡಲಾಗುತ್ತದೆ. ಒಂದು ಗ್ರೂಪ್ ನಲ್ಲಿ ಎಷ್ಟು ಮಂದಿ ಅಡ್ಮಿನ್ ಗಳಿದ್ದರೂ ಅವರಿಗೆಲ್ಲರಿಗೂ ಈ ಆಯ್ಕೆ ದೊರಕಲಿದೆ. ಶೀಘ್ರದಲ್ಲಿಯೇ ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ. 

ಗ್ರೂಪ್ ಅಡ್ಮಿನ್ ಯಾವುದೇ ಸಂದೇಶವನ್ನು ಅಳಿಸಿ ಹಾಕಿದಾಗ “ದಿಸ್ ವಾಸ್ ಡಿಲೀಟೆಡ್ ಬೈ ಆನ್ ಅಡ್ಮಿನ್” ಎಂಬ ಸಂದೇಶ ಇತರ ಸದಸ್ಯರಿಗೆ ಕಾಣಿಸುತ್ತದೆ. ವಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಹರಿದಾಡುವ ಅಶ್ಲೀಲ ಹಾಗೂ ಆಕ್ಷೇಪಾರ್ಹ ಸಂದೇಶಗಳನ್ನು ನಿಯಂತ್ರಿಸಲು ಈ ಆಯ್ಕೆಯು ಗ್ರೂಪ್ ಅಡ್ಮಿನ್ ಗಳಿಗೆ ಸಹಕರಿಸುತ್ತದೆ.

Ads on article

Advertise in articles 1

advertising articles 2

Advertise under the article

ಸುರ