-->
ವಿಜಯ್ ಮಲ್ಯಗೆ ಮತ್ತೆ ಹಿನ್ನಡೆ: ಲಂಡನ್ ನಲ್ಲಿರುವ ಐಷಾರಾಮಿ ಮನೆ ತೊರೆಯುವಂತೆ ಕೋರ್ಟ್ ಆದೇಶ

ವಿಜಯ್ ಮಲ್ಯಗೆ ಮತ್ತೆ ಹಿನ್ನಡೆ: ಲಂಡನ್ ನಲ್ಲಿರುವ ಐಷಾರಾಮಿ ಮನೆ ತೊರೆಯುವಂತೆ ಕೋರ್ಟ್ ಆದೇಶ

ಲಂಡನ್(ಇಂಗ್ಲೆಂಡ್​): ಸ್ವಿಸ್ ಬ್ಯಾಂಕ್​ನೊಂದಿಗಿನ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ಇದೀಗ ಮತ್ತೆ ತೀವ್ರ ಹಿನ್ನಡೆ ಉಂಟಾಗಿದೆ. ಲಂಡನ್​​ನಲ್ಲಿರುವ ಐಷಾರಾಮಿ ನಿವಾಸವನ್ನು ತೊರೆಯುವಂತೆ ವಿಜಯ್ ಮಲ್ಯಗೆ ಕೋರ್ಟ್ ಆದೇಶ ನೀಡಿದೆ.

ವಿಜಯ್ ಮಲ್ಯ ತಮ್ಮ ಮನೆ ಸೇರಿದಂತೆ ಇತರ ಆಸ್ತಿಯನ್ನು ಒತ್ತೆಯಿಟ್ಟು ಸ್ವಿಸ್​ ಬ್ಯಾಂಕ್​ನಲ್ಲಿ  ಸಾಲವನ್ನು ಪಡೆದಿದ್ದರು‌. ಈ ಬಗ್ಗೆ ಹಲವಾರು ಬಾರಿ ಸಾಲ ಮರುಪಾವತಿಗೆ ಸೂಚನೆ ನೀಡಲಾಗಿತ್ತು. ಜೊತೆಗೆ ಅದರ ದಿನಾಂಕವನ್ನೂ ವಿಸ್ತರಣೆ ಮಾಡಲಾಗಿತ್ತು. ಸಾಲ ಮರುಪಾವತಿ ಮಾಡಲಾಗದ ಹಿನ್ನೆಲೆಯಲ್ಲಿ ಮಲ್ಯ ಕುಟುಂಬದವರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣ ಅವರು ತಮ್ಮ ಐಷಾರಾಮಿ ನಿವಾಸವನ್ನು ತೊರೆಯಬೇಕೆಂದು ಕೋರ್ಟ್​ ಆದೇಶ ನೀಡಿದೆ.

ವಿಜಯ್ ಮಲ್ಯ ಐಷಾರಾಮಿ ಮನೆ ಲಂಡನ್​ನ ಕಾರ್ನ್​​ವಾಲ್ ಟೆರೇಸ್​ ಬಳಿ ಇದ್ದು, ರೆಜೆಂಟ್ ಪಾರ್ಕ್​ಗೆ ಸಮೀಪದಲ್ಲಿದೆ. ಅದಷ್ಟಲ್ಲದೇ ವಿಶ್ವವಿಖ್ಯಾತ ಮೇಡಂ ಟುಸ್ಸಾಡ್ಸ್​​ ಮ್ಯೂಸಿಯಂ ಕೂಡಾ ವಿಜಯ್ ಮಲ್ಯ ನಿವಾಸಕ್ಕೆ ಸಮೀಪದಲ್ಲಿತ್ತು. ಪ್ರಸ್ತುತ ಈ ಐಷಾರಾಮಿ ಮನೆಯಲ್ಲಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಹಾಗೂ 95 ವರ್ಷದ ತಾಯಿ ಲಲಿತಾ ವಾಸವಾಗಿದ್ದರು.

Ads on article

Advertise in articles 1

advertising articles 2

Advertise under the article