-->

ಅವಳಿ - ಜವಳಿ ಮಕ್ಕಳಾದರೂ ಜನನದಲ್ಲಿ ಒಂದು ವರ್ಷದ ಅಂತರ: ಅಪರೂಪದ ವಿದ್ಯಮಾನ!

ಅವಳಿ - ಜವಳಿ ಮಕ್ಕಳಾದರೂ ಜನನದಲ್ಲಿ ಒಂದು ವರ್ಷದ ಅಂತರ: ಅಪರೂಪದ ವಿದ್ಯಮಾನ!

ನವದೆಹಲಿ: ಅವಳಿ - ಜವಳಿ ಮಕ್ಕಳೆಂದರೆ ಸಾಮಾನ್ಯ ಆ ಶಿಶುಗಳ ಜನ್ಮದಿನಾಂಕ ಒಂದೇ ಆಗಿರುತ್ತದೆ. ಆದರೆ ಇಲ್ಲೊಂದು ಅಚ್ಚರಿಯೆನಿಸುವಂಥಹ ವಿದ್ಯಮಾನ ಸಂಭವಿಸಿದೆ. ಇಲ್ಲೊಬ್ಬಳು ತಾಯಿ ಜನ್ಮನೀಡಿದ್ದು ಅವಳಿ - ಜವಳಿ ಶಿಶುಗಳಿಗಾದರೂ, ಈ ಎರಡೂ ಮಕ್ಕಳ ಜನ್ಮದಿನಾಂಕದಲ್ಲಿ ಒಂದು ವರ್ಷದ ವ್ಯತ್ಯಾಸ ಉಂಟಾಗಿದೆ.

ಹೌದು.. ಕ್ಯಾಲಿಫೋರ್ನಿಯಾದ ನೇಟಿವಿಡಾಡ್ ಮೆಡಿಕಲ್ ಸೆಂಟರ್​ನ ಆಸ್ಪತ್ರೆಯಲ್ಲಿ ಇಂಥದ್ದೊಂದು ವಿದ್ಯಮಾನ ಜರುಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ ಇಂತಹ ಶಿಶುಗೈ ಜನನ ಸಾಮಾನ್ಯವಾಗಿ 20 ಲಕ್ಷ ಹೆರಿಗೆಗಳಿಗೊಮ್ಮೆ ಆಗುವ ಸಾಧ್ಯತೆ ಇರುತ್ತದೆ. ಅಂಥಹ ವಿಶೇಷವಾದೊಂದು ಹೆರಿಗೆ ಈ ಬಾರಿ ನಮ್ಮ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಅಲ್ಲಿನ ವೈದ್ಯರು ಹೇಳಿಕೊಂಡಿದ್ದಾರೆ. 

ಫಾತಿಮಾ ಮ್ಯಾಡ್ರಿಗಲ್​ ಎಂಬ ತಾಯಿಯೇ ಇಂಥಹ ವಿರಳಾತಿ ವಿರಳ ಮಕ್ಕಳಿಗೆ ಜನ್ಮ ನೀಡಿರುವಾಕೆ. ಈಕೆಯ ಅವಳಿ - ಜವಳಿ ಮಕ್ಕಳ ಪೈಕಿ ಮೊದಲಿಗೆ ಗಂಡು ಮಗುವಿನ ಜನನವಾಗಿದೆ. ಆ ಬಳಿಕ ಹೆಣ್ಣು ಮಗು ಹುಟ್ಟಿದೆ. ಗಂಡು ಮಗು 2020ರ ಡಿಸೆಂಬರ್ 31ರ ರಾತ್ರಿ 11.45ಕ್ಕೆ ಜನಿಸಿದೆ. ಅದೇ ರೀತಿ 15 ನಿಮಿಷಗಳ ಬಳಿಕ ಹೆಣ್ಣು ಮಗು ಜನಿಸಿದೆ. ಹೀಗಾಗಿ ಇವರಿಬ್ಬರ ಜನನದಲ್ಲಿ 15 ನಿಮಿಷಗಳ ಅಂತರ ಕಂಡು ಬಂದಿದೆ. ಆದ್ದರಿಂದ  ಅವಳಿ - ಜವಳಿಗಳಾದರೂ ಇವರಿಬ್ಬರ ಜನ್ಮದಿನಾಂಕದಲ್ಲಿ ಒಂದು ವರ್ಷದ ವ್ಯತ್ಯಾಸ ಉಂಟಾದಂತಾಗಿದೆ. 

ಫಾತಿಮಾ ಮ್ಯಾಡ್ರಿಗಲ್​ ಹಾಗೂ ರಾಬರ್ಟ್​ ಟ್ರುಜಿಲೊ ದಂಪತಿಗೆ ಈ ಅವಳಿ - ಜವಳಿ ಮಕ್ಕಳ ಹೊರತಾಗಿ ಇನ್ನಿಬ್ಬರು ಪುತ್ರಿಯರು ಹಾಗೂ ಓರ್ವ ಗಂಡು ಮಗುವನ್ನು ಹೊಂದಿದ್ದಾರೆ. 

Ads on article

Advertise in articles 1

advertising articles 2

Advertise under the article