
ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲಿಯೇ ಮಹಿಳೆ ಆತ್ಮಹತ್ಯೆ!
1/10/2022 01:27:00 AM
ಹುಬ್ಬಳ್ಳಿ: ನಗರದ ಹಳೆಯ ಬಸ್ ನಿಲ್ದಾಣ ಮುಂಭಾಗ ಡಮ್ಮಣಗಿ ಕಂಫರ್ಟ್ಸ್ ಲಾಡ್ಜ್ ನಲ್ಲಿ ಮೈಸೂರು ಮೂಲದ ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಕೆ ತನ್ನ ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆಲಮಂಗಲದಲ್ಲಿ ಪರಿಸರ ಅಭಿಯಂತರೆಯಾಗಿದ್ದ ಮೈಸೂರು ಮೂಲದ ಶಾಂತಲಾ ಸುಪ್ರೀತಾ ಬೆಳಗಾವಿ (43) ನೇಣಿಗೆ ಶರಣಾದ ಮಹಿಳೆ.
ಅಕ್ಟೋಬರ್ ನಲ್ಲಿ ಶಾಂತಲಾ ಸುಪ್ರೀತಾ ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ನೋವು ಇವರನ್ನು ಕಾಡುತ್ತಿತ್ತು. ಅಲ್ಲದೆ ಇವರಿಗೆ ಬೆನ್ನುನೋವಿನ ಸಮಸ್ಯೆ ತಲೆದೋರಿತ್ತು. ಇದರಿಂದ ಮನನೊಂದಿದ್ದ ಶಾಂತಲಾ ಡೆತ್ ನೋಟ್ ಬರೆದಿಟ್ಟು ತಮ್ಮ ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲಿ ರವಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.