
ಪರೋಕ್ಷವಾಗಿ ಪವನ್ ಕಲ್ಯಾಣ್ ಬಳಿ ಕ್ಷಮೆ ಕೇಳಿದ ವಿವಾದಾತ್ಮಕ ನಟಿ ಶ್ರೀರೆಡ್ಡಿ!
Tuesday, January 25, 2022
ಹೈದರಾಬಾದ್: ಕಾಲಿವುಡ್ ನ ವಿವಾದಾತ್ಮಕ ನಟಿ ಶ್ರೀರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮೀಟೂ ಪ್ರಕರಣದ ವೇಳೆ ನಟಿ ಶ್ರೀರೆಡ್ಡಿ ದಿನಕ್ಕೊಬ್ಬ ಸ್ಟಾರ್ ನಟರ ಮೇಲೆ ಆರೋಪ ಮಾಡುತ್ತಿದ್ದರು. ಅದೇ ಸಂದರ್ಭ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ವಿರುದ್ಧ ಶ್ರೀರೆಡ್ಡಿ ತಿರುಗಿಬಿದ್ದು, ಭಾರೀ ಹೇಳಿಕೆಗಳನ್ನು ನೀಡಿದ್ದರು.
ಆದರೆ, ಈ ಬಾರಿ ನಟ ಪವನ್ ಕಲ್ಯಾಣ್ ಹಾಗೂ ಅವರ ತಾಯಿ ಅಂಜನಾ ದೇವಿ ಕ್ಷಮೆಯಾಚಿಸಿ ಗಮನ ಸೆಳೆದಿದ್ದಾರೆ. ಅಂದಹಾಗೆ , ಮೀಟೂ ಅಭಿಯಾನದ ವೇಳೆ ಸುಮಾರು 2 ವರ್ಷಗಳ ಹಿಂದೆ ಶ್ರೀರೆಡ್ಡಿ ಅವರು ಅರೆಬೆತ್ತಲಾಗಿ ಬೀದಿಯಲ್ಲಿ ಕೂತು ಅವಾಂತರ ಸೃಷ್ಟಿಸಿದ್ದರು. ಅಲ್ಲದೆ ಆಕೆ ತೆಲುಗು ಚಿತ್ರರಂಗದ ನಿರ್ಮಾಪಕ ಸುರೇಶ್ ಬಾಬು ಪುತ್ರ ಅಭಿರಾಮ್ ದಗ್ಗುಬಾಟಿ ಮೇಲೆ ತೀವ್ರ ಆರೋಪಗಳನ್ನು ಹೊರಿಸಿದರು. ಈ ಬಗ್ಗೆ ನಟ ಪವನ್ ಕಲ್ಯಾಣ್ ಅವರ ಪ್ರತಿಕ್ರಿಯನ್ನು ಮಾಧ್ಯಮಗಳು ಕೇಳಿದಾಗ, ಅವರು ನಟಿ ಶ್ರೀರೆಡ್ಡಿಗೆ ಅವರಿಗೆ ಬೆಂಬಲ ನೀಡಿಲ್ಲ. ಇದೇ ವಿಚಾರಕ್ಕೆ ಕೋಪಗೊಂಡ ನಟಿ ಶ್ರೀರೆಡ್ಡಿ, ಪವನ್ ಕಲ್ಯಾಣ್ ಗೆ ಬಾಯಿಗೆ ಬಂದಂತೆ ಬೈದಿದ್ದರು. ಜೊತೆಗೆ, ಪವನ್ ಕಲ್ಯಾಣ್ ಅವರ ಮೇಲಿನ ಸಿಟ್ಟನ್ನು ಅವರ ತಾಯಿ ಅಂಜನಾ ದೇವಿ ಮೇಲೆ ತೀರಿಸಲು ಅವರಿಗೆ ಬೈದಿದ್ದರು. ಹಾಗಾಗಿ, ಅಂದು ನಟಿ ಆಡಿದ ಹಗುರವಾದ ಮಾತುಗಳನ್ನು ನೆನಪಿಸಿಕೊಂಡು ಈಗ ಶ್ರೀರೆಡ್ಡಿ ಕ್ಷಮೆ ಯಾಚಿಸಿದ್ದಾರೆ.
ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಹಳ ಕಾಮೆಂಟ್‌ಗಳನ್ನು ಗಿಟ್ಟಿಸಿಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟಿ , 'ಮೆಗಾ ಸ್ಟಾರ್ ಚಿರಂಜೀವಿ ಟಾಲಿವುಡ್ ನಲ್ಲಿ ದೊಡ್ಡ ಸ್ಟಾರ್. ನಾನು ಅವರ ತಾಯಿ ಅಂಜನಾ ದೇವಿ ಮೇಲೆ ಹಗುರವಾಗಿ ಶಬ್ದಗಳನ್ನು ಬಳಸಬಾರದಿತ್ತು. ನಾನು ಅಂದು ಆಡಿರುವ ಮಾತಿಗೆ ಇಂದು ಅಂಜನಾ ದೇವಿಯವರಿಗೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ' ಎಂದು ವಿಡಿಯೋದಲ್ಲಿ ಹೇಳಿದ್ದಾರೆ .
ಜೊತೆಗೆ ಶ್ರೀರೆಡ್ಡಿ ತಮ್ಮ ವೀಡಿಯೋದಲ್ಲಿ ನಟ ಪವನ್ ಕಲ್ಯಾಣ್‌ರನ್ನು ಅವಮಾನ ಮಾಡಿರುವುದ್ದಕ್ಕೆ ಪರೋಕ್ಷವಾಗಿ ಕ್ಷಮೆ ಕೇಳಿದ್ದಾರೆ. ಆದರೆ ಅವರು ಎಲ್ಲೂ ಪವನ್ ಕಲ್ಯಾಣ್ ಹೆಸರನ್ನು ಬಳಸದೆ, ಕ್ಷಮೆ ಯಾಚನೆ ಮಾಡಿರುವ ಮೂಲಕವೂ ಗಮನ ಸೆಳೆದಿದ್ದಾರೆ. ಇದು , ಪವರ್‌ಸ್ಟಾರ್ ಅಭಿಮಾನಿಗಳಲ್ಲಿ ಸಂತಸ ತಂದಿದೆ . ಈ ವೀಡಿಯೋ ಫೇಸ್ ಬುಕ್ ನಲ್ಲಿ 22 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ.