ನಾಟಿಮದ್ದಿಗಾಗಿ ಬರುತ್ತಿದ್ದಾಕೆಯನ್ನೇ ಕೊಲೆಗೈದ ನಾಟಿವೈದ್ಯ

ಬೆಂಗಳೂರು: ನಾಟಿ ವೈದ್ಯನೊಬ್ಬ ಚಿನ್ನದ ಸರಕ್ಕಾಗಿ ತನ್ನಲ್ಲಿಗೆ ನಾಟಿಮದ್ದಿಗಾಗಿ ಬರುತ್ತಿದ್ದ  ಮಹಿಳೆಯನ್ನೇ ಹತ್ಯೆ ಮಾಡಿರುವ ಘಟನೆಯೊಂದು ಯಲಹಂಕ ಠಾಣಾ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಬಳಿ ಘಟನೆ ನಡೆದಿದೆ.

ಸಿದ್ದಮ್ಮ (55) ಎಂಬಾಕೆ ಮೃತಪಟ್ಟ ಮಹಿಳೆ. 

ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದಮ್ಮ ಆರೋಪಿ ನಾಟಿವೈದ್ಯ ಸಲೀಂ ಎಂಬಾತನ ಮನೆಗೆ ಹಲವು ತಿಂಗಳಿಂದ ನಾಟಿಮದ್ದಿಗಾಗಿ ಬರುತ್ತಿದ್ದರು. ಈ ವೇಳೆ ಆರೋಪಿ ಸಲೀಂ ಆಕೆಯ ಬಳಿಯಿದ್ದ ಚಿನ್ನದ ಸರ, ಓಲೆ ಮೇಲೆ ಸಲೀಂ ಕಣ್ಣಿಟ್ಟಿದ್ದ. 

ಎಂದಿನಂತೆ ಆರೋಪಿ ಸಲೀಂ ಮನೆಗೆ ಔಷಧಿಗಾಗಿ ಸಿದ್ದಮ್ಮ‌ ಮೊನ್ನೆಯೂ ಹೋಗಿದ್ದಾರೆ. ಈ ವೇಳೆ ಆರೋಪಿ ಆಕೆಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ಕದ್ದು‌ ಪರಾರಿಯಾಗಿದ್ದಾನೆ.  

ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.