
ಈಜುಕೊಳದಲ್ಲಿ ಶ್ರಿಯಾ ಶರಣ್ ಲಿಪ್ ಲಾಕ್ ಫೋಟೋ ವೈರಲ್!
1/05/2022 08:27:00 PM
ಹೈದರಾಬಾದ್: ಸೌತ್ ಇಂಡಿಯಾ ಸಿನಿ ಉದ್ಯಮದಲ್ಲಿ ಯಶಸ್ವಿಯಾಗಿರುವ ಕೆಲವೇ ನಟಿಯರಲ್ಲಿ ನಟಿ ಶ್ರಿಯಾ ಸರಣ್ ಕೂಡಾ ಒಬ್ಬರು. ಶ್ರಿಯಾ ಹಲವು ಸೂಪರ್ ಹಿಟ್ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಇಂತಿಪ್ಪ ಶ್ರಿಯಾ 2018 ರಲ್ಲಿ ರಷ್ಯಾದ ಛಾಯಾಗ್ರಾಹಕ ಮತ್ತು ಉದ್ಯಮಿ ಆಂಡ್ರೆ ಕೊಸ್ಟೆವ್ ಅವರನ್ನು ವಿವಾಹವಾಗಿದ್ದಾರೆ. ವಿವಾಹದ ಬಳಿಕ ಚಿತ್ರರಂಗವನ್ನು ತೊರೆಯುವ ಎಲ್ಲಾ ನಟಿಯರಂತಲ್ಲದೆ, ರಾಧಾ ಎಂಬ ಪುತ್ರಿಗೆ ತಾಯಿಯಾದ ಬಳಿಕವೂ ನಟಿ ಶ್ರಿಯಾ ಸಿನಿಮಾಗಳಲ್ಲಿ ನಟಿಸಲು ಮತ್ತೆ ಮರಳಿದ್ದಾರೆ. ಈ ಬ್ಯುಸಿಗಳ ಮಧ್ಯೆಯೂ ಅವರು ತಮ್ಮ ಒಂದಿಷ್ಟು ಫೋಟೋಗಳು, ವೀಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ.
ಇದೀಗ ಹೊಸ ವರ್ಷದ ದಿನದಂದು ಸೇರೆ ಹಿಡಿದಿರುವ ಫೋಟೋವೊಂದನ್ನು ಶ್ರಿಯಾ ಹಂಚಿಕೊಂಡಿದ್ದಾರೆ. ಆ ಫೋಟೊದಲ್ಲಿ ಅವರು ಈಜುಕೊಳದಲ್ಲಿ ತಮ್ಮ ಪತಿಯೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು ಭಾರೀ ವೈರಲ್ ಆಗುತ್ತಿದೆ.
ಶ್ರಿಯಾ ಶರಣ್ ಸದ್ಯ ಎಸ್ಎಸ್ ರಾಜಮೌಳಿಯವರ 'ಆರ್ ಆರ್ ಆರ್' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಅಜಯ್ ದೇವಗನ್ ರೊಂದಿಗೆ ಸರೋಜಿನಿ ಎಂಬ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ, ಹಿಂದಿಯಲ್ಲಿ 'ತತ್ಕಾ' ಚಿತ್ರೀಕರಣವಾಗುತ್ತಿದ್ದು, ತಮಿಳಿನಲ್ಲಿ 'ನರಗಸೂರನ್' , 'ಸಂಡಕ್ಕರಿ' ಎಂಬ ಎರಡು ಸಿನಿಮಾಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.