-->
ಪ್ಯಾಂಟೇ ಇಲ್ಲದ ಜೀವನ ಬೇಕೆಂದ ಇಲಿಯಾನಾ ಡಿಕ್ರೂಜ್ ಗೆ ನೆಟ್ಟಿಗರು ಹೇಳಿದ್ದೇನು ಗೊತ್ತೇ?

ಪ್ಯಾಂಟೇ ಇಲ್ಲದ ಜೀವನ ಬೇಕೆಂದ ಇಲಿಯಾನಾ ಡಿಕ್ರೂಜ್ ಗೆ ನೆಟ್ಟಿಗರು ಹೇಳಿದ್ದೇನು ಗೊತ್ತೇ?

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಇಲಿಯಾನಾ ಡಿಕ್ರೂಜ್ ಇನ್​ಸ್ಟಾಗ್ರಾಂನಲ್ಲಿ ಯಾವಾಗಲೂ ಬಿಕಿನಿ ಫೋಟೋಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಿರುತ್ತಾರೆ. ಸದಾ ಹಾಟ್​ ಆ್ಯಂಡ್​ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಇಲಿಯಾನಾ ಈ ಬಾರಿ ಬೋಲ್ಡ್​ ಹೇಳಿಕೆ ನೀಡುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. 

ಪ್ರವಾಸ ಪ್ರಿಯೆಯಾಗಿರುವ ಇಲಿಯಾನಾ ಡಿಕ್ರೂಜ್ ಶೂಟಿಂಗ್​ ನಿಂದ ವಿರಾಮ ಪಡೆದು ತಮ್ಮ ಕನಸಿನ ತಾಣಗಳಿಗೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಈ ಮೂಲಕ ಅವರು ಯಾವಾಗಲೂ ಸಖತ್​ ಎಂಜಾಯ್​ ಮಾಡುತ್ತಿರುತ್ತಾರೆ. ಅಲ್ಲದೆ, ಈ ವೇಳೆ ತಾವು ಸೆರೆಹಿಡಿದಂತಹ ಫೋಟೋಗಳನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಅವರು ಬಿಕಿನಿ ಫೋಟೋಗಳನ್ನೇ ಹರಿಯಬಿಡುತ್ತಿರುತ್ತಾರೆ. 


ಇದೀಗ ಹಳೆಯ ಬಿಕಿನಿ ಫೋಟೋವೊಂದನ್ನು ಮತ್ತೆ ಶೇರ್​ ಮಾಡಿರುವ ಇಲಿಯಾನಾ 'ಐ ಆ್ಯಮ್​ ಆಲ್​ ಅಬೌಟ್​ ನೋ ಪ್ಯಾಂಟ್​ ಲೈಫ್' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಇಲಿಯಾನಾ ಅವರು ಪ್ಯಾಂಟೇ ಇಲ್ಲದ ಜೀವನ ಬೇಕು ಎಂದು ಹೇಳಿಕೆ​ ನೀಡಿ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನೇಕ ನೆಟ್ಟಿಗರು 'ತಮ್ಮ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆಯಿದೆ. ನಿಮ್ಮ ನಿರ್ಧಾರದಿಂದ ನಮಗೇನು ತೊಂದರೆಯಿಲ್ಲ. ಅಂದರೆ ನೀವು ಶಿಶು ಜೀವನ ಬಯಸಿದ್ದೀರಾ' ಎಂದೆಲ್ಲ ಕಮೆಂಟ್​ ಮಾಡಿದ್ದಾರೆ.  

ಇನ್ನು ಇಲಿಯಾನಾ ಸಿನಿಮಾ ವಿಚಾರಕ್ಕೆ ಬಂದರೆ, ಅವರು ಕೊನೆಯದಾಗಿ ಅಭಿಷೇಕ್​ ಬಚ್ಚನ್​ ಅಭಿನಯದ ಬಿಗ್​ಬುಲ್​ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

Ads on article

Advertise in articles 1

advertising articles 2

Advertise under the article