-->
ಮತ್ತೆ ಒಂದಾಗಲಿದ್ದಾರೆಯೇ ಈ ತಾರಾದಂಪತಿ: ಸಮಂತಾ ಕೆಲಸದಿಂದ ಅಭಿಮಾನಿಗಳಲ್ಲಿ ಮೂಡಿತು ನಿರೀಕ್ಷೆ!

ಮತ್ತೆ ಒಂದಾಗಲಿದ್ದಾರೆಯೇ ಈ ತಾರಾದಂಪತಿ: ಸಮಂತಾ ಕೆಲಸದಿಂದ ಅಭಿಮಾನಿಗಳಲ್ಲಿ ಮೂಡಿತು ನಿರೀಕ್ಷೆ!

ಹೈದರಾಬಾದ್​: ತಾರಾ ದಂಪತಿ ಸಮಂತಾ ಹಾಗೂ ನಾಗಚೈತನ್ಯ ಅಕ್ಟೋಬರ್​ 2ರಂದು ದಿಢೀರೆಂದು ವಿಚ್ಛೇದನ​ ಘೋಷಣೆ ಮಾಡಿರುವುದರಿಂದ ಅವರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿತ್ತು. ಆದ್ದರಿಂದ ಅವರು ಮತ್ತೆ ಒಂದಾಗಲಿದ್ದಾರೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಅದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸಮಂತಾ ಮಾಡಿರುವ ಕೆಲಸವದರಿಂದ ಈ ದಂಪತಿ ಮತ್ತೆ ಒಂದಾಗಲಿದ್ದಾರೆ ಎಂಬ ಆಸೆ ಅಭಿಮಾನಿಗಳಲ್ಲಿ ಮತ್ತೆ ಚಿಗುರಿದೆ. ಸಮಂತಾ ಮಾಡಿದ ಆ ಕೆಲಸವೇನೆಂದರೆ, ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿದ್ದ ವಿಚ್ಛೇದನೆ​ ಘೋಷಣೆಯ ಪೋಸ್ಟ್​ ಅನ್ನು ಡಿಲೀಟ್​ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. 


ಸಮಂತಾ ಈ ರೀತಿ ಯಾಕೆ ಮಾಡಿದರೂ ಎಂದು ಅಭಿಮಾನಿಗಳು ಯೋಚನೆಯಲ್ಲಿದ್ದಾರೆ. ಇಬ್ಬರು ಮತ್ತೆ ಒಂದಾಗಲಿದ್ದಾರೆಯೇ? ಸಮಂತಾ ಮತ್ತೆ ಅಕ್ಕಿನೇನಿ ಕುಟುಂಬಕ್ಕೆ ಬರಲು ಯತ್ನಿಸುತ್ತಿದ್ದಾರಾ? ಎಂಬ ಚರ್ಚೆ ಆರಂಭವಾಗಿದೆ.  

ಆದರೆ, ನಾಗಚೈತನ್ಯ ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ವಿಚ್ಛೇದನಾ​ ಪೋಸ್ಟ್​ ಅನ್ನು ಡಿಲೀಟ್ ಮಾಡಿಲ್ಲ. ಒಂದು ವೇಳೆ ಅವರಿಬ್ಬರೂ ಒಂದಾಗುವುದಾದರೆ, ನಾಗಚೈತನ್ಯ ಖಾತೆಯಲ್ಲೂ ಪೋಸ್ಟ್​ ಡಿಲೀಟ್​ ಆಗಬೇಕಿತ್ತು. ಆದರೆ ನಾಗಚೈತನ್ಯ ಖಾತೆಯಲ್ಲಿ ಡಿಲೀಟ್​ ಆಗದಿರುವುದು ಅಭಿಮಾನಿಗಳಿ ನಿರಾಸೆ ತಂದಿದೆ. ಇನ್​ಸ್ಟಾಗ್ರಾಂನಲ್ಲಿ ಕಹಿ ನೆನಪುಗಳನ್ನು ಅಳಿಸುವ ಪ್ರಕ್ರಿಯೆಯಲ್ಲಿ ವಿಚ್ಛೇದನಾ​ ಪೋಸ್ಟ್​ ಕೂಡ ಡಿಲೀಟ್​ ಆಗಿದೆ ಎಂದು ಹೇಳಲಾಗುತ್ತಿದೆ.  

ವಿಚ್ಛೇದನಕ್ಕೊಳಗಾಗಿರುವ ತಾರಾದಂಪತಿ ಸದ್ಯ ತಮ್ಮ ಗಮನವನ್ನು ಸಂಪೂರ್ಣ ಸಿನಿಮಾಗಳ ಕಡೆ ಕೇಂದ್ರೀಕರಿಸಿದ್ದಾರೆ. ನಾಗಚೈತನ್ಯ ಅಭಿನಯದ ಬಂಗಾರರಾಜು ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಬಾಕ್ಸ್​ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಇತ್ತ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ನಟ ಅಲ್ಲು ಅರ್ಜುನ್​ ಅಭಿನಯದ ಪುಷ್ಪ ಸಿನಿಮಾದಲ್ಲಿ ಸಮಂತಾ ಮೊದಲ ಬಾರಿಗೆ ಐಟಂ ಡಾನ್ಸ್​ಗೆ ಸೊಂಟ ಬಳುಕಿಸಿದ್ದು, ಹಾಡು ಸಿಕ್ಕಾಪಟ್ಟೆ ಹಿಟ್​ ಆಗಿದೆ.

Ads on article

Advertise in articles 1

advertising articles 2

Advertise under the article