-->
ನಟ ಧನುಷ್ - ಐಶ್ವರ್ಯಾ ದಾಂಪತ್ಯ ವಿಚ್ಛೇದನ ದಿಢೀರ್ ನಿರ್ಧಾರವಲ್ಲ: ಸ್ನೇಹಿತರು ಹೇಳಿದ್ದೇನು?

ನಟ ಧನುಷ್ - ಐಶ್ವರ್ಯಾ ದಾಂಪತ್ಯ ವಿಚ್ಛೇದನ ದಿಢೀರ್ ನಿರ್ಧಾರವಲ್ಲ: ಸ್ನೇಹಿತರು ಹೇಳಿದ್ದೇನು?

ಚೆನ್ನೈ: ಕಾಲಿವುಡ್​ನ ಸ್ಟಾರ್​ ನಟ ಧನುಷ್​ ಹಾಗೂ ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ ದಂಪತಿ ತಮ್ಮ 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುವುದಾಗಿ ಜ.17 ರಂದು ದಿಢೀರ್ ಘೋಷಣೆ ಮಾಡಿದ್ದಾರೆ‌. ಇದು ತಮಿಳು ಚಿತ್ರರಂಗ ಮಾತ್ರವಲ್ಲ ಅಸಂಖ್ಯಾತ ಅಭಿಮಾನಿಗಳಿಗೂ ಆಘಾತ ತಂದಿದೆ. ಆದರೆ ಧನುಷ್​ ಹಾಗೂ ಐಶ್ವರ್ಯಾರ ಸ್ನೇಹಿತರು​ ಹೇಳುವ ಪ್ರಕಾರ ಈ ನಿರ್ಧಾರ ದಿಢೀರನೇ ತೆಗೆದುಕೊಂಡ ನಿರ್ಧಾರವಲ್ಲ. ಬರೋಬ್ಬರಿ ಆರು ತಿಂಗಳು ಧನುಷ್​ ಮತ್ತು ಐಶ್ವರ್ಯಾ ಪರಸ್ಪರ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಅದರಲ್ಲೂ ಧನುಷ್ ಹಾಗೂ ಐಶ್ವರ್ಯಾ ತುಂಬಾ ವರ್ಷಗಳ ಹಿಂದೆಯೇ ವಿಚ್ಛೇದನ ಪಡೆಯಬೇಕಿತ್ತಂತೆ. ಆದರೆ, ಮಕ್ಕಳು ಸಣ್ಣವರಾದ ಕಾರಣ ಅವರು ಸ್ವಲ್ಪ ದೊಡ್ಡವರಾಗುವವರೆಗೂ ಸುಮ್ಮನಿದ್ದರು. ಇದೀಗ ಮಕ್ಕಳಿಬ್ಬರೈ ದೊಡ್ಡವರಾಗಿ ಒಂದು ಹಂತಕ್ಕೆ ಬಂದಿದ್ದು, ವಿಚ್ಛೇದನಕ್ಕೆ ಇದು ಸೂಕ್ತ ಸಮಯವೆಂದು ತಿಳಿದು ಇಬ್ಬರು ಬೇರೆಯಾಗಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ. 

ಇನ್ನು ವಿಚ್ಛೇದನದ​ ನಿರ್ಧಾರದ ಹಿಂದೆ ಯಾವುದೇ ವೈಯಕ್ತಿಕ ದ್ವೇಷವಾಗಲಿ ಅಥವಾ ಕೌಟುಂಬಿಕ ಕಲಹಗಳಾಗಲಿ ಇರಲಿಲ್ಲ. ಧನುಷ್​ ಅವರ ಕೆಲಸದ ಸ್ವಭಾವವೇ ಡಿವೋರ್ಸ್​ಗೆ ಕಾರಣ ಎಂದು ಸ್ನೇಹಿತರು ಹೇಳುತ್ತಿದ್ದಾರೆ. ಅವರು 'ಸಿನಿಮಾವೇ ತನ್ನ ಸರ್ವಸ್ವ ಎಂದು ಭಾವಿಸಿದ್ದ ಧನುಷ್​, ಕುಟುಂಬಕ್ಕೆ ಸಮಯ ನೀಡುತ್ತಿರಲಿಲ್ಲ. ಇದೇ ವಿಚಾರಕ್ಕೆ ಐಶ್ವರ್ಯಾ ಜತೆ ಜಗಳ ನಡೆಯುತ್ತಿತ್ತು. ಆದರೆ, ಜಗಳದ ಬಳಿಕವೂ ಧನುಷ್​ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿದ್ದರು ಎಂದು ಸ್ನೇಹಿತರೊಬ್ಬರು ಹೇಳಿದ್ದಾರೆ. 

ಧನುಷ್ 'ಸಿನಿಮಾಗಳನ್ನು ತಪ್ಪಿಸಿಕೊಳ್ಳುವ ಮಾಧ್ಯಮವಾಗಿ ಬಳಸಿಕೊಂಡಿದ್ದರು. ಏಕೆಂದರೆ, ಸದಾ ಅಂತರ್ಮುಖಿಯಾಗಿರುವ ಅವರಿಗೆ ತನ್ನ ಸಮಸ್ಯೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ಬಹಳ ಕಷ್ಟಕರವಾಗಿತ್ತು. ಹೀಗಾಗಿಯೇ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. 

ಜ.17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ಅನ್ನು ಖಚಿತಪಡಿಸಿರುವ ಧನುಷ್​, 'ನಾವು ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ' ಎಂದು ಧನುಷ್​ ಟ್ವೀಟ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ. 

ಐಶ್ವರ್ಯಾ ಹಾಗೂ ಧನುಷ್​ 2004ರ ನವೆಂಬರ್​ 18ರಂದು ವಿವಾಹವಾಗಿದ್ದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ.

Ads on article

Advertise in articles 1

advertising articles 2

Advertise under the article