ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

Digital Life Certificate- ಮನೆ ಬಾಗಿಲಿಗೆ ಪಿಂಚಣಿ: ಡಿಜಿಟಲ್ ಲೈಫ್ ಸರ್ಟಿಪಿಕೇಟ್ ಸೇವೆ ಆರಂಭ

ಮನೆ ಬಾಗಿಲಿಗೆ ಪಿಂಚಣಿ: ಡಿಜಿಟಲ್ ಲೈಫ್ ಸರ್ಟಿಪಿಕೇಟ್ ಸೇವೆ ಆರಂಭ





ಮಂಗಳೂರು: ಕೇಂದ್ರ ಸರ್ಕಾರವು ಅಂಚೆ ಕಚೇರಿಗಳ ಮೂಲಕ ಪಿಂಚಣಿದಾರರ ಮನೆ ಬಾಗಿಲಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆಯನ್ನು ಪ್ರಾರಂಭಿಸಿದೆ. ಪೋಸ್ಟ್ ಮ್ಯಾನ್ ಪಿಂಚಣಿದಾರರ ನಿವಾಸಕ್ಕೆ ಭೇಟಿ ನೀಡಿ ಡಿಜಿಟಲ್ ಲೈಫ್ ಪ್ರಮಾಣಪತ್ರಗಳನ್ನು ಸಂಗ್ರಹಿಸುವರು.



ಪಿಂಚಣಿದಾರರು ಇಪಿಎಫ್‍ಒನ ಇಪಿಎಸ್ 1995 ಪೆಂಶನ್ ಯೋಜನೆಯಡಿ ಪಿಂಚಣಿದಾರರು ತಮ್ಮ ಜೀವನ್ ಪ್ರಮಾಣ್ (ಡಿಜಿಟಲ್ ಲೈಫ್ ಪ್ರಮಾಣಪತ್ರಗಳು) ಅನ್ನು ಪಿಂಚಣಿ ಪಡೆಯುವ ಬ್ಯಾಂಕ್ ಶಾಖೆಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರ, ಉಮಂಗ್ ಅಪ್ಲಿಕೇಶನ್, ಇಪಿಎಫ್‍ಒ ಕಚೇರಿ ಅಥವಾ ಫೋಸ್ಟ್ ಆಫೀಸ್‌ಗಳ ಮೂಲಕ ಸಲ್ಲಿಸಬಹುದು.



ಹೆಚ್ಚಿನ ಮಾಹಿತಿಗೆ ಮಂಗಳೂರು ಪ್ರಾದೇಶಿಕ ಕಚೇರಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಭವಿಷ್ಯ ನಿಧಿ ಭವನ, ನಂ: 572, ಹೈಲ್ಯಾಂಡ್ಸ್, ಸಿಲ್ವಾರೋಡ್ಸ್, ಮಂಗಳೂರು ಅಥವಾ ದೂರವಾಣಿ: 0824-2432999 ಅನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.