-->
ಹೊಸ ವರ್ಷದಂದೇ ತಮ್ಮ ಪ್ರೀತಿಗೆ ತಿಲಾಂಜಲಿ ನೀಡಿದ ದೀಪ್ತಿ ಸುನೈನಾ: ಇದೆಲ್ಲವೂ ಬಿಗ್ ಬಾಸ್ ಕರಾಮತ್ತು

ಹೊಸ ವರ್ಷದಂದೇ ತಮ್ಮ ಪ್ರೀತಿಗೆ ತಿಲಾಂಜಲಿ ನೀಡಿದ ದೀಪ್ತಿ ಸುನೈನಾ: ಇದೆಲ್ಲವೂ ಬಿಗ್ ಬಾಸ್ ಕರಾಮತ್ತು

ಹೈದರಾಬಾದ್​: ಹೊಸ ವರ್ಷದಂದೇ ತೆಲುಗಿನ ಪ್ರಖ್ಯಾತ ಯೂಟ್ಯೂಬರ್ ಶಾನು ಪ್ರೀತಿಗೆ ದೀಪ್ತಿ ಸುನೈನಾ ಎಳ್ಳು ನೀರು ಬಿಟ್ಟಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಲವ್​ ಬ್ರೇಕಪ್​ ಬಗ್ಗೆ ದೀಪ್ತಿ ಬರೆದುಕೊಂಡಿದ್ದಾರೆ. 

"ನನ್ನೆಲ್ಲಾ ಪ್ರೀತಿಯ ಹಿತೈಷಿಗಳು ಹಾಗೂ ಗೆಳೆಯ/ಗೆಳತಿಯರೇ… ಬಹಳಷ್ಟು ಯೋಚನೆಯ ಬಳಿಕ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ನಾನು ಹಾಗೂ ಶಾನು ಪರಸ್ಪರ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದೇವೆ‌‌.  ನಮ್ಮಿಬ್ಬರ ವೈಯುಕ್ತಿಕ ಜೀವನದಲ್ಲಿ ನಾವು ಬೇರೆ ಬೇರೆಯಾಗಿ ಮುಂದುವರಿಯಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನಮ್ಮ ದಾರಿಯಲ್ಲಿ ನಾವು ಸಾಗುತ್ತೇವೆ. ಈ ಐದು ವರ್ಷಗಳಲ್ಲಿ ನಾವು ಸಾಕಷ್ಟು ಸಮಯವನ್ನು ಜೊತೆಯಾಗಿ, ಸಂತೋಷವಾಗಿ ಕಳೆದಿದ್ದೇವೆ. ಆದರೆ, ನಮ್ಮ ಎದುರಾಳಿಗಳ ವಿರುದ್ಧ ವ್ಯವಹರಿಸುವುದು ಕಷ್ಟವಾಗಿದೆ. ಆದ್ದರಿಂದ ಇದಕ್ಕೆಲ್ಲಾ ಕೊನೆಹಾಡಲು ನಿರ್ಧರಿಸಿದ್ದು, ಇನ್ಮುಂದೆ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿರುವುದಿಲ್ಲ" ಎಂದಿದ್ದಾರೆ.

ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್ ​ನಲ್ಲಿ ಭಾರೀ ಪ್ರಖ್ಯಾತಿ ಹೊಂದಿರುವ ಮುದ್ದಾದ ಜೋಡಿಗಳು. ಅವರಿಬ್ಬರೂ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿರುವುದನ್ನು ಸ್ವತಃ ಷಣ್ಮುಖ್​ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದರು. ಆದರೆ, ಬಿಗ್​ಬಾಸ್​ ಸೀಸನ್​ - 5 ಇವರಿಬ್ಬರ ಪ್ರೀತಿಗೆ ಎಳ್ಳುನೀರು ಬಿಟ್ಟಿದೆ. ಇದೀಗ ದೀಪ್ತಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್​ ಹೇಳಿದ್ದಾರೆ. 

ಶಾನು ಹಾಗೂ ದೀಪ್ತಿಯ ಮಧ್ಯೆ ಬ್ರೇಕಪ್ ಆಗಿದೆ ಎಂಬ ವಿಚಾರ ಕೆಲ ಸಮಯಗಳ ಹಿಂದೆಯೇ ಬಯಲಾಗಿತ್ತು. ಶಾನು ಕ್ಯಾಪ್ಟನ್​ ಆದ ಬಳಿಕ ಪ್ರತಿಸ್ಪರ್ಧಿ ಸಿರಿಯವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ಅವರಿಬ್ಬರ ಮಧ್ಯೆ ಭಾರಿ ಸಲುಗೆ ಇರುವಂತೆ ತೋರುತ್ತಿತ್ತು. ಈ ಎಪಿಸೋಡ್ ಅನ್ನು ನೋಡಿದ ದೀಪ್ತಿ ಬಹಳ ಕೋಪಗೊಂಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.

ಅಲ್ಲದೆ ಶಾನು ಮತ್ತು ಸಿರಿ ಬಹಳ ಸಲುಗೆಯಿಂದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಿಂದ ಹೊರಬಂದ ನಂತರವೂ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿದ್ದರು. ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. 

ಇದೀಗ ದೀಪ್ತಿ ಅಧಿಕೃತವಾಗಿ ಲವ್​ ಬ್ರೇಕಪ್​ ಮಾಡಿಕೊಳ್ಳುವ ಮೂಲಕ ಅನುಮಾನವನ್ನು ನಿಜವಾಗಿಸಿದ್ದಾರೆ. ಇತ್ತ ಸಿರಿಗೂ ಮೊದಲೇ ಬಾಯ್​ಫ್ರೆಂಡ್​ ಇದ್ದಾನೆ. ಆತನ ಹೆಸರು ಶ್ರೀಹಾನ್​. ಇದೀಗ ಆತ ತನ್ನ ಮೊಬೈಲ್​ನಲ್ಲಿದ್ದ ಸಿರಿ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿದ್ದಾನೆಂದು ತಿಳಿದುಬಂದಿದೆ. ಶಾನು ಜತೆಗಿನ ಸಿರಿ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್​ ಆಕೆಯೊಂದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್​ಬಾಸ್​ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಒಂದು ಪ್ರೀತಿ ಬ್ರೇಕ್​ ಆಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100