-->

ಹೊಸ ವರ್ಷದ ಪಾರ್ಟಿಗೆಂದು ಮೇಕೆಗಳನ್ನು ಕದ್ದು ಭರ್ಜರಿ ಬಾಡೂಟ ಮಾಡಿದ ಎಎಸ್ಐ ಅಮಾನತು!

ಹೊಸ ವರ್ಷದ ಪಾರ್ಟಿಗೆಂದು ಮೇಕೆಗಳನ್ನು ಕದ್ದು ಭರ್ಜರಿ ಬಾಡೂಟ ಮಾಡಿದ ಎಎಸ್ಐ ಅಮಾನತು!

ಬಲಂಗೀರ್: 'ಬೇಲಿಯೇ ಎದ್ದು ಹೊಲವನ್ನು ಮೇಯ್ತು' ಎಂಬಂತೆ ಇಲ್ಲೊಬ್ಬ ಪೊಲೀಸ್​ ಅಧಿಕಾರಿಯೇ ಹೊಸ ವರ್ಷದ ಪಾರ್ಟಿಗೆಂದು 2 ಮೇಕೆಗಳನ್ನು ಕದ್ದು ಭರ್ಜರಿ ಬಾಡೂಟ ಮಾಡಿ ತಿಂದು ತೇಗಿರುವ ಘಟನೆ ನಡೆದಿದೆ.

ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆಯ ಎಎಸ್‌ಐ ಸುಮನ್ ಮಲ್ಲಿಕ್ ಮೇಕೆ ಕದ್ದ ಆರೋಪಿ ಎಂದು ಹೇಳಲಾಗುತ್ತಿದೆ.

ಹೊಸ ವರ್ಷಕ್ಕೂ ಮುನ್ನಾ ದಿನ ಸಿಂಧೆಕೆಲಾ ಗ್ರಾಮದಲ್ಲಿ 2 ಮೇಕೆಗಳು ಕಳವಾಗಿದ್ದವು. ಮೇಕೆಗಳನ್ನು ಹುಡುಕಿಕೊಂಡ ಹೊರಟ ಮಾಲಕನಿಗೆ ಎಎಸ್​ಐ ಸುಮನ್ ಮಲ್ಲಿಕ್ ಬಳಿ ಮೇಕೆಗಳಿರುವುದು ತಿಳಿದು ಬಂದಿದೆ. ಅವುಗಳನ್ನು ವಾಪಸ್​ ಕೊಡುವಂತೆ ಆತ  ಕಣ್ಣೀರಿಟ್ಟು ಮನವಿ ಮಾಡಿದ್ದಾನೆ. ಆದರೆ ಇದಕ್ಕೆ ಕ್ಯಾರೆ ಎನ್ನದೆ ಎಎಸ್​ಐ, ಕದ್ದ ಮೇಕೆಗಳನ್ನು ಕೊಂದು ನ್ಯೂ ಇಯರ್​ ಪಾರ್ಟಿಗೆ ಬಾಡೂಟ ಮಾಡಿಸಿದ್ದಾನದ. ಇದೀಗ ಎಎಸ್​ಐ ವಿರುದ್ಧ ಮೇಕೆ ಮಾಲಕ ಗುರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಆಗ ಪೊಲೀಸ್ ಸಿಬ್ಬಂದಿ ಮೇಕೆಯ ಮಾಲಕನನ್ನು ಪೊಲೀಸ್​ ವಾಹನದಲ್ಲಿ‌ ಬೇರೆಡೆಗೆ ಕರೆದೊಯ್ದಿದ್ದಾರೆ. ಇದರಿಂದ ಕಂಗಾಲಾದ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದಾರೆ. ಮೇಕೆ ಮಾಲಕನನ್ನು ಬಿಡುವಂತೆ ಹಾಗೂ 2 ಮೇಕೆಗಳ ಹಣ ಕೊಡುವಂತೆ ಆಗ್ರಹಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಎಸ್ಪಿ ನಿತಿನ್ ಕುಸಲ್ಕರ್​, ಹೊಸ ವರ್ಷದ ದಿನವೇ ಎಎಸ್‌ಐ ಸುಮನ್ ಮಲ್ಲಿಕ್ ನನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ತನ್ನ ಸಿಬ್ಬಂದಿ ಮೂಲಕ ಎಎಸ್​ಐ ಮೇಕೆಗಳನ್ನು ಕಳವು ಮಾಡಿಸಿದ್ದನೆಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. 

Ads on article

Advertise in articles 1

advertising articles 2

Advertise under the article