ಮೂಡಬಿದಿರೆಯಲ್ಲಿ ಎಕ್ಸಿಡೆಂಟ್- ಯುವ ಕಲಾವಿದನ ಸಾವು
ಮೂಡುಬಿದಿರೆ ಗಂಟಾಲಕಟ್ಟೆ ಸಮೀಪ ಬೆಳಗ್ಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ಕಲಾವಿದರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಹಿರಿಯಡ್ಕ ಮೇಳ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಎಂದು ಗುರುತಿಸಲಾಗಿದೆ.
ಕುಂದಾಪುರದ ಕೊಂಕಿ ಎಂಬಲ್ಲಿ ಕಳೆದ ರಾತ್ರಿ ಯಕ್ಷಗಾನ ಪ್ರದರ್ಶನವನ್ನು ಮುಗಿಸಿ ತಮ್ಮ ಮನೆಗೆ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಮನೆಗೆ ಹೋಗುವಾಗ ಬೆಳಗಿನ ಜಾವ ಅಪಘಾತ ವಾಗಿರುತ್ತದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಗೊಳಿಯತ್ತೂರು ನಿವಾಸಿ ಅಣ್ಣು ದೇವಾಡಿಗ ಅವರ ಪುತ್ರನಾಗಿರುವ ವಾಮನ ಕುಮಾರ್ ಸ್ತ್ರೀ ವೇಷ, ಕಥಾ ನಾಯಕನ ಪಾತ್ರ ಮಾಡುತ್ತಿದ್ದರು.
ಮೃತ ನಿಧನಕ್ಕೆ ಹಿರಿಯ ಕಲಾವಿದರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

