ನೆಟ್ಟಿಗನ ಪ್ರಶ್ನೆಗೆ ಗರಂ ಆದ ನಟಿ ಅನಸೂಯಾ ಭಾರದ್ವಾಜ್: ಆಕೆಯ ಉತ್ತರವೇನಿತ್ತು ಗೊತ್ತೇ?

ಹೈದರಾಬಾದ್​: ಟಾಲಿವುಡ್​ನ ಪ್ರಸಿದ್ಧ ನಟಿ ಹಾಗೂ ನಿರೂಪಕಿ ಅನಸೂಯ ಭಾರದ್ವಾಜ್, ನೆಟ್ಟಿಗರು ಕೇಳಿರುವ ಪ್ರಶ್ನೆಯೊಂದಕ್ಕೆ ಭಾರೀ ಗರಂ ಆಗಿದ್ದಾರೆ. 

ಅನಸೂಯ ತೆಲುಗು ಮನರಂಜನಾ ಲೋಕದ ಬಹುಬೇಡಿಕೆಯ ಕಲಾವಿದೆಯಾಗಿದ್ದು, ಇವರು ಟಿವಿ ಕಾರ್ಯಕ್ರಮಗಳಲ್ಲದೆ ಸಿನಿಮಾ ಶೂಟಿಂಗ್​ನಲ್ಲಿಯೂ ಬಿಜಿಯಾಗಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುವ ಅವರು ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳನ್ನು ಸಂತೋಷ ಪಡಿಸುತ್ತಿರುತ್ತಾರೆ. 

ಇತ್ತೀಚೆಗೆ ಅನಸೂಯ  ಸಂಕ್ರಾಂತಿ ಹಬ್ಬವನ್ನು ಕುಟುಂಬ ಸಹಿತ ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಈ ವೇಳೆ ತಮ್ಮ ಪತಿಯೊಂದಿಗೆ ಗಾಳಿಪಟ ಹಾರಿಸುವ ಫೋಟೋಗಳನ್ನು  ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲವೊಮ್ಮೆ ಅವರು ಅಭಿಮಾನಿಗಳೊಂದಿಗೆ ಜಾಲತಾಣಗಳಲ್ಲಿ ಚರ್ಚೆಯನ್ನೂ ನಡೆಸುತ್ತಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಟ್ಟಿಗೆ ಚಾಟ್​ ಮಾಡುವಾಗ ನೆಟ್ಟಿಗನೊಬ್ಬ ಕೇಳಿರುವ ಪ್ರಶ್ನೆಗೆ ಅನುಮಸೂಯ ಕೆಂಡಾಮಂಡಲವಾಗಿದ್ದಾರೆ.

ನೆಟ್ಟಿಗನೊಬ್ಬ ''ನಾನು ನಿಮ್ಮನ್ನು ಅಕ್ಕ ಅಥವಾ ಆಂಟಿ ಎಂದು ಕರೆಯಬೇಕೆ" ಎಂದು ಕೇಳಿದ್ದಾನೆ. ಇದರಿಂದ ಕೋಪಗೊಂಡ ಅನಸೂಯ "ನನ್ನನ್ನು ಯಾವ ರೀತಿಯೂ ಕರೆಯೋದು ಬೇಡ. ನನ್ನ ಬಗ್ಗೆ ಏನೂ ಗೊತ್ತಿಲ್ಲದ ಮೇಲೆ ನನ್ನನ್ನು ಆಂಟಿ ಎಂದು ಕರೆಯೋಕೆ ನೀನ್ಯಾರು" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅನಸೂಯಾ ಇಷ್ಟು ಹೇಳುತ್ತಿದ್ದಂತೆ ನೆಟ್ಟಿಗರು ಅನಸೂಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಅಕ್ಕ ಅಥವಾ ಆಂಟಿ ಎಂದು ಕರೆಯುವುದರಲ್ಲಿ ತಪ್ಪೇನಿದೆ?. ಈ ರೀತಿ ಕರೆದರೆ ಅವಮಾನ ಹೇಗಾಗುತ್ತದೆ?' ಎಂದು ಪ್ರಶ್ನಿಸುವ ಮೂಲಕ ಅನಸೂಯಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಭಾರದ್ವಾಜ್ ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿರುವ ಅಲ್ಲು ಅರ್ಜುನ್​ ನಟನೆಯ ಪುಷ್ಪ ಸಿನಿಮಾದಲ್ಲಿ ನಟಿಸಿದ್ದಾರೆ. ಇದರೊಂದಿಗೆ ಟಿವಿ ಕಾರ್ಯಕ್ರಮಗಳಲ್ಲೂ ತುಂಬಾ ಬಿಜಿಯಾಗಿದ್ದಾರೆ.