-->
3 ವರ್ಷದ ಹಸುಗೂಸಿನ ಮೇಲೆ ವಿಕೃತಿ ಮೆರೆದ 30ರ ಕಾಮುಕ ಅರೆಸ್ಟ್

3 ವರ್ಷದ ಹಸುಗೂಸಿನ ಮೇಲೆ ವಿಕೃತಿ ಮೆರೆದ 30ರ ಕಾಮುಕ ಅರೆಸ್ಟ್

ಹುಬ್ಬಳ್ಳಿ: 3 ವರ್ಷದ ಹಸುಗೂಸಿನ  ಮೇಲೆ 30 ವರ್ಷದ ಕಾಮುಕನೋರ್ವನು ಅತ್ಯಾಚಾರಕ್ಕೆ ಯತ್ನಿಸಿರುವ ಪೈಶಾಚಿಕ ಘಟನೆ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಗುವಿನ ಮನೆಯ ಸಮೀಪದಲ್ಲೇ ವಾಸವಾಗಿದ್ದ, ಈ ಕಾಮುಕ ಪರಿಚಯದವರ ಮಗುವಿನ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈತ ಮಗುವಿನ ಕಾಲಿಗೆ ಕಚ್ಚಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ. ಈತ ಮದ್ಯದ ಅಮಲಿನಲ್ಲಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article