-->
ದೀಪ್ತಿ ಸುನೈನಾ ಬಿಗ್ ಬಾಸ್ -2 ನಲ್ಲಿದ್ದಾಗ ತನೀಶ್ ಜೊತೆಗೆ ಮಾಡಿದ್ದೇನು? ಶ್ರೀರೆಡ್ಡಿ ಶಾಕಿಂಗ್ ಹೇಳಿಕೆ

ದೀಪ್ತಿ ಸುನೈನಾ ಬಿಗ್ ಬಾಸ್ -2 ನಲ್ಲಿದ್ದಾಗ ತನೀಶ್ ಜೊತೆಗೆ ಮಾಡಿದ್ದೇನು? ಶ್ರೀರೆಡ್ಡಿ ಶಾಕಿಂಗ್ ಹೇಳಿಕೆ

ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿ ಸದಾ ಸುದ್ದಿಯಲ್ಲಿರುವ ತೆಲುಗು ಸಿನಿಲೋಕದ ವಿವಾದಿತ ನಟಿ ಶ್ರೀರೆಡ್ಡಿ   ನಟಿ ದೀಪ್ತಿ ಸುನೈನಾ ವಿರುದ್ಧ ಹರಿಹಾಯ್ದಿದ್ದಾರೆ. ತೆಲುಗು ಯೂಟ್ಯೂಬ್ ಸರ್ಕಲ್ ನ ಪ್ರಖ್ಯಾತ ಜೋಡಿಯಾಗಿರುವ ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದರು.‌ ಬಿಗ್​ಬಾಸ್​ ಸೀಸನ್​ - 5 ಇವರಿಬ್ಬರ ಪ್ರೀತಿಗೆ ಹುಳಿ ಹಿಂಡಿದೆ. ಈ ಹೊಸ ವರ್ಷದಂದೇ ದೀಪ್ತಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್​ ಹೇಳಿದ್ದಾರೆ. 

ಅಲ್ಲದೆ, ದೀಪ್ತಿ ಸುನೈನಾ ಇತ್ತೀಚೆಗೆ ಇನ್​ಸ್ಟಾಗ್ರಾಂ ಲೈವ್​ನಲ್ಲಿ ತಮ್ಮ ಪ್ರಿತಿಯ​ ಬಗ್ಗೆ ಮಾತನಾಡಿ ಕಣ್ಣೀರಧಾರೆಯನ್ನೇ ಹರಿಸಿದ್ದರು. ಇದೀಗ ದೀಪ್ತಿ ಸುನೈನಾ ಬ್ರೇಕಪ್​ ಬಗ್ಗೆ ನಟಿ ಶ್ರೀರೆಡ್ಡಿ, ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

 'ದೀಪ್ತಿ ಸುನೈನಾ, ಶಾನುವಿನಿಗಿಂತ ಹಿರಿಯಳಾಗಿದ್ದಾಳೆ. ಏಕೆಂದರೆ, ಆಕೆ ಬಿಗ್​ಬಾಸ್​ ಸೀಸನ್​ - 2ರಲ್ಲಿ ಸ್ಪರ್ಧೆ ಮಾಡಿದ್ದಳು. ಶಾನು ಬಿಗ್ ಬಾಸ್  5ನೇ ಸೀಸನ್​ನಲ್ಲಿ ಸ್ಪರ್ಧಿಸಿ ಈಗಷ್ಟೇ ಹೊರಬಂದಿದ್ದಾನೆ. ದೀಪ್ತಿಯೂ ಅಂದು ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಶಾನು ರೀತಿಯಲ್ಲಿಯೇ ವರ್ತಿಸಿದ್ದಳು. ದೀಪ್ತಿ ಅಂದು ಬಿಗ್ ಬಾಸ್ ಮನೆಯೊಳಗೆ ತನ್ನ ಪ್ರತಿಸ್ಪರ್ಧಿ ತನೀಶ್​ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು ಎಂದು ಹೇಳಿದ್ದಾರೆ. 

''ನೀವಿಬ್ಬರು ಕಳೆದ 5 ವರ್ಷದಿಂದ ಸಂಬಂಧದಲ್ಲಿದ್ದೀರಿ. ಇಬ್ಬರೂ ಹಲರು ಏರಿಳಿತಗಳನ್ನು ನೋಡಿದ್ದೀರಿ. ಶಾನು ಹಾಗೂ ಸಿರಿ ಸಂಬಂಧದಿಂದ ನೊಂದು ದೀಪ್ತಿಯು ಶಾನುವಿನೊಂದಿಗೆ ಬ್ರೇಕ್ ಅಪ್​ ಮಾಡಿಕೊಂಡಿದ್ದಾರೆ. ಹಾಗಾದರೆ, ದೀಪ್ತಿ 2ನೇ ಸೀಸನ್ ಬಿಗ್ ಬಾಸ್ ನಲ್ಲಿ ತನೀಶ್​ ಜೊತೆಗೆ ಮಾಡಿದ್ದೇನು? ಅದು ಕೂಡಾ ತಪ್ಪಲ್ಲವೇ? ಆದರೆ, ಶಾನು-ಸಿರಿಯ ಸಂಬಂಧ ದೀಪ್ತಿಗೆ ಸರಿ ಕಾಣಲಿಲ್ಲ. ದೀಪ್ತಿ ಮತ್ತು ಶಾನು ಸಂಬಂಧದಲ್ಲಿ ಇದ್ದೀರಿ, ಅದಕ್ಕಾಗಿಯೇ ಅವರು ಬ್ರೇಕ್ ಅಪ್ ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಈಗಾಗಲೇ ದೀಪ್ತಿ , ಶಾನುವನ್ನು ಮದುವೆ ಆಗಿದ್ದರೆ, ಆಗಲೂ ಅವರನ್ನು ಬಿಟ್ಟುಬಿಡುತ್ತಿದ್ದರೇ?. ಎಲ್ಲರೂ ತಪ್ಪು ಮಾಡುತ್ತಾರೆ. ಯಾವಾಗ ಇಬ್ಬರ ನಡುವೆ ಬಲವಾದ ಬೆಸುಗೆ ಇರುತ್ತದೆಯೋ ಅವರು ತಮ್ಮ ಸಮಸ್ಯೆಯನ್ನು ತಾವೇ ಸರಿಪಡಿಸಿಕೊಳ್ಳುತ್ತಾರೆ. ಆಗ ಮಾತ್ರ ನಾವು ನಮ್ಮ ಜೀವನವನ್ನು ಮುಂದುವರಿಸಬಹುದು'' ಎಂದು ಶ್ರೀರೆಡ್ಡಿ ದೀಪ್ತಿಗೆ ಪಾಠ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article