-->
ಹಿರಿಯ ನಟನೊಂದಿಗೆ ನಮಿತಾ  ಡೇಟಿಂಗ್ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ನಟಿಯ 2ನೇ ಪತಿ ಗರಂ

ಹಿರಿಯ ನಟನೊಂದಿಗೆ ನಮಿತಾ ಡೇಟಿಂಗ್ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ನಟಿಯ 2ನೇ ಪತಿ ಗರಂ

ಮಂಗಳೂರು: ಇತ್ತೀಚೆಗೆ, ನಟಿ ನಮಿತಾ ಸಿನಿಮಾಗಳಲ್ಲಿ ಅಷ್ಟೊಂದಾಗಿ  ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇದೀಗ ಅವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡು ಮಾಡುತ್ತಿದೆ. ಅದು ಸಿನಿಮಾ ಅಥವಾ ಅವರು ನಟಿಸಿರುವ ಪಾತ್ರಗಳಿಗಾಗಿಯಲ್ಲ. ಬದಲಾಗಿ ಅವರು ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. 

ಹಲವು ದಿನಗಳಿಂದ ನಟಿ ನಮಿತಾ ಈಗ ಹಿರಿಯ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ವಿಚಾರಕ್ಕೆ ನಮಿತಾ ಅವರ ಎರಡನೇ ಪತಿಯೂ ಗರಂ ಆಗಿದ್ದಾರೆ. ಹಾಗೆ ನೋಡಲು ಹೋದರೆ, ಈ ಸುದ್ದಿ ಇಂದಿನದ್ದಲ್ಲ. 2017ರಿಂದಲೇ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಆದರೆ, ಸದ್ಯ ಈ ಸುದ್ದಿ ವೈರಲ್ ಆಗತೊಡಗಿದೆ. 

ನಟಿ ನಮಿತಾ ಅವರು ಹಿರಿಯ ಪೋಷಕ ನಟ ಶರತ್ ಬಾಬುರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಮದುವೆಯ ಬಳಿಕವೂ ನಮಿತಾ ಹಿರಿಯ ನಟನೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇಂಥಹದ್ದೊಂದು ಸುದ್ದಿ ಕೇವಲ ಡೇಟಿಂಗ್ ವಿಚಾರಕ್ಕೆ ಮುಕ್ತಾಯವಾಗಿಲ್ಲ. ಬದಲಿಗೆ, ಶರತ್ ಬಾಬು ಹಾಗೂ ನಮಿತಾ ಮದುವೆಯಾಗಲಿದ್ದಾರೆ ಎಂದು ಸಹ ಹೇಳಲಾಗುತ್ತಿತ್ತು.

ಆದರೆ, ಸದ್ಯ ಈ ಸುದ್ದಿಗೆ ನಮಿತಾ ಮತ್ತು ಅವರ 2ನೇ ಪತಿ ವೀರೇಂದ್ರ ಚೌಧರಿ ತೆರೆ ಎಳೆದಿದ್ದಾರೆ. ನಟಿ ನಮಿತಾ ಪತಿ ವೀರೇಂದ್ರ ಚೌಧರಿ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ಮದುವೆ ಬಳಿಕ ನಮಿತಾ ನನ್ನೊಂದಿಗೆ ಇದ್ದಾರೆ. ಅವರು ಈ ಸುದ್ದಿ ವಿಚಾರವಾಗಿ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಈ ಗಾಳಿ ಸುದ್ದಿ ಎಲ್ಲಿಂದ ಆರಂಭವಾದವು ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ. ನಮಗೆ ಶರತ್ ಬಾಬು ಯಾರು ಎಂದೂ ಗೊತ್ತಿಲ್ಲ . ಅವರೊಬ್ಬ ಹಿರಿಯ ನಟನಾಗಿದ್ದು, ಇದರಿಂದ ಅವರಿಗೂ ತೊಂದರೆ ಆಗಿರುತ್ತದೆ. ಇದು ಪಕ್ಕಾ ತಪ್ಪು ಮಾಹಿತಿ' ಎಂದು ಹೇಳಿದ್ದಾರೆ.

ಜತೆಗೆ, ಈ ಬಗ್ಗೆ ನಟಿ ನಮಿತಾ ಪ್ರತಿಕ್ರಿಯೆ ನೀಡಿ, 'ನನಗೆ ಶರತ್ ಬಾಬು ಯಾರು ಎಂದು ನನಗೆ ಗೊತ್ತೇ ಇಲ್ಲ. ಈ ಸುದ್ದಿ ಮಾಧ್ಯಮಗಳಲ್ಲಿ ಹೇಗೆ ಬಿತ್ತರವಾಯಿತು ಎಂದು ನನಗೆ ಗೊತ್ತಿಲ್ಲ. ಇದು ಸುಳ್ಳುಸುದ್ದಿಯಾಗಿದ್ದು, ನನಗಿಂತ ವಯಸ್ಸಿನಲ್ಲಿ ದುಪ್ಪಟ್ಟು ದೊಡ್ಡವರಾದ ವ್ಯಕ್ತಿಯನ್ನು ನಾನು ಹೇಗೆ ಮದುವೆ ಆಗುತ್ತೀನಿ?' ಎಂದು ಹೇಳಿದ್ದಾರೆ.

ಹೀಗೆ ನಮಿತಾ ಹಾಗೂ ಅವರು ಪತಿ ಇದು ಸುಳ್ಳು ಸುದ್ದಿ ಎಂದು ಹಿಂದೆಯೇ ಸ್ಪಷ್ಟನೆ ನೀಡಿದ್ದರೂ, ಈ ಬಗ್ಗೆ ನಮಿತಾ ಈ ಹಿಂದೆಯೇ ಮಾತನಾಡಿದ್ದಾರೆ. ಆದರೂ ಕೂಡ ಈ ಸುದ್ದಿ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ.

Ads on article

Advertise in articles 1

advertising articles 2

Advertise under the article