ಧಾರ್ಮಿಕ ಕೇಂದ್ರಗಳಿಗೆ ಕಾಂಡೊಮ್ ಹಾಕಿದಾತ ಜೈಲಿನಿಂದ ಹೊರಬಂದಲ್ಲಿ ಕೈಕಾಲು ಕಡಿಯುವೆ: ಆಕ್ರೋಶದ ವೀಡಿಯೋ ವೈರಲ್

ಮಂಗಳೂರು: ಕೊರಗಜ್ಜನ ಕಟ್ಟೆ ಸೇರಿದಂತೆ 18 ಧಾರ್ಮಿಕ ಕ್ಷೇತ್ರಗಳಿಗೆ ಕಾಂಡೊಮ್ ಹಾಕಿ ಅಪವಿತ್ರಗೊಳಿಸಿ ಬಂಧನಕ್ಕೊಳಗಾದ ಆರೋಪಿ ದೇವದಾಸ್ ದೇಸಾಯಿಗೆ ಜೈಲಿನೊಳಗಡೆಯೇ ಕಠಿಣ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ  ಆತ ಜೈಲಿನಿಂದ ಹೊರ ಬಂದಾಗ ತಾನೇ ಆತನ ಕೈಕಾಲು ಕಡಿಯುವೆ ಎಂದು ವ್ಯಕ್ತಿಯೋರ್ವರು ಹೇಳಿರುವ ವೀಡಿಯೊವೊಂದು ವೈರಲ್ ಆಗಿದೆ.




ತಾನೂ ಕ್ರಿಶ್ಚಿಯನ್ ಸಮುದಾಯದವನು. ತನ್ನ ಹೆಸರು ರೋಶನ್ ಡಿಸೋಜ ಎಂದಿರುವ ಅವರು, ಈತನ ಕೃತ್ಯದಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ನ್ಯೂಲೈಫ್ ನವರು ಮಾಡುವುದೇ ಇಂಥದ್ದು. ಕಾಂಡೊಮ್ ಮತ್ತಿತರ ವಸ್ತುಗಳನ್ನು ಧಾರ್ಮಿಕ ಕೇಂದ್ರಗಳಿಗೆ ಹಾಕಿರುವ ವಿಚಾರದಲ್ಲಿ ಕ್ಷಮೆ ನೀಡುವುದು ಸಾಧ್ಯವೇ ಇಲ್ಲ. ಆದ್ದರಿಂದ ಆತನಿಗೆ ಗಲ್ಲಿಗೇರಿಸಿದರೂ ಅದು ಕಡಿಮೆ ಶಿಕ್ಷೆಯೇ ಎಂದು ಅವರು ಹೇಳಿದ್ದಾರೆ

ಈತನ ಕೃತ್ಯದಿಂದ ನಿಜವಾದ ಕ್ರೈಸ್ತರಿಗೆ ನೋವಾಗಿದೆ. ಇಂದು ದೇವದಾಸ್ ದೇಸಾಯಿ ಮಾಡಿರುವ ಕೆಲಸವನ್ನು ನಾಳೆ ಮತ್ತೋರ್ವ ಮಾಡುತ್ತಾನೆ. ಆದ್ದರಿಂದ ಈತನಿಗೆ ದೊರಕಿರುವ ಶಿಕ್ಷೆ ಇನ್ನೊಬ್ಬನಿಗೆ ಪಾಠವಾಗಲಿ. ಆದ್ದರಿಂದ ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂದು ರೋಶನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.