-->
ನೇರ ಪ್ರಸಾರದ ವೇಳೆಯೇ ಟಿವಿ ವರದಿಗಾರ್ತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಿಂಭಾಗಕ್ಕೆ ಹೊಡೆದ ವ್ಯಕ್ತಿ!

ನೇರ ಪ್ರಸಾರದ ವೇಳೆಯೇ ಟಿವಿ ವರದಿಗಾರ್ತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಿಂಭಾಗಕ್ಕೆ ಹೊಡೆದ ವ್ಯಕ್ತಿ!

ರೋಮ್: ಫುಟ್‌ಬಾಲ್‌ ಪಂದ್ಯದ ನೇರಪ್ರಸಾರ ಮಾಡುತ್ತಿರುವ ವೇಳೆಯೇ ವ್ಯಕ್ತಿಯೋರ್ವನು ಟಿವಿ ವರದಿಗಾರ್ತಿಯ ಹಿಂಭಾಗಕ್ಕೆ ಆಗಮಿಸಿ ಆಕೆಯ ಖಾಸಗಿ ಅಂಗಕ್ಕೆ ಹೊಡೆದು ಬಳಿಕ ಕೈಮೇಲೆ ಉಗುಳಿ, ಹೊಡೆದಿರುವ ಘಟನೆ ಇಟಲಿಯ ಎಂಪೋಲಿಯಾದ ಕಾರ್ಲೋ ಕ್ಯಾಸ್ಟೆಲ್ಲಾನದಲ್ಲಿ ನಡೆದಿದೆ. 

ಟೋಸ್ಕಾನಾ ಟಿವಿಯ ವರದಿಗಾರ್ತಿ ಬೆಕಾಗ್ಲಿಯಾ ಪಂದ್ಯ ಮುಗಿದ ಬಳಿಕ ಅದರ ನೇರ ಪ್ರಸಾರವನ್ನು ನಡೆಸುತ್ತಿದ್ದರು. ಈ ವೇಳೆ ಆಕೆ ಪಂದ್ಯದ ಕುರಿತು ಅಭಿಮಾನಿಗಳ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದರು. ಆಗ ಫುಟ್‌ಬಾಲ್ ಅಭಿಮಾನಿಯೊಬ್ಬ ಬಂದು ಈ ರೀತಿ ವರ್ತಿಸಿದ್ದಾನೆ. ಇದರಿಂದ ತೀವ್ರವಾಗಿ ಮುಜುಗರಕ್ಕೊಳಗಾದ ವರದಿಗಾರ್ತಿ, ಆತನಿಗೆ ಅಕ್ಲಿಯೇ ಬೈದಿದ್ದಾಳೆ. ಆಕೆ ಕೋಪಗೊಂಡಿರುವುದನ್ನು ಕಂಡು ನ್ಯೂಸ್‌ ರೀಡರ್‌ ನೇರ ಪ್ರಸಾರದಲ್ಲಿಯೇ ವರದಿಗಾರ್ತಿಯನ್ನು ಸಮಾಧಾನ ಪಡಿಸಿದ್ದಾನೆ. ಇಡೀ ಘಟನೆ ನೇರಪ್ರಸಾರದಲ್ಲಿ ಪ್ರಸಾರಗೊಂಡಿದೆ.‌‌ ಈ ಕೃತ್ಯಕ್ಕೆ ಭಾರಿ ಖಂಡನೆ ವ್ಯಕ್ತವಾಗಿದೆ. 

ವರದಿಗಾರ್ತಿ ಬೆಕಾಗ್ಲಿಯಾ ಈ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ತಕ್ಷಣ ಆತನನ್ನು ಪತ್ತೆಹಚ್ಚಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಸಂಪೂರ್ಣ ವೆಚ್ಚವನ್ನು ತಾನು ಭರಿಸುವುದಾಗಿ ಟೋಸ್ಕಾನಾ ಚಾನೆಲ್‌ ಹೇಳಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬೆಕಾಗ್ಲಿಯಾ, ‘ನನಗೆ ಅಲ್ಲಿ ಏನಾಗಿದೆ ಎಂಬುವುದು ಮುಖ್ಯವಲ್ಲ.  ಘಟನೆಯ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗುತ್ತಿತ್ತು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಹಲ್ಲೆ, ಮಾನಭಂಗಗಳನ್ನು ಚಿತ್ರೀಕರಿಸಲು ಯಾವುದೇ ಕ್ಯಾಮೆರಾ ಇರುವುದಿಲ್ಲ. ಅಂಥವರು ನ್ಯಾಯಕ್ಕಾಗಿ ಪರದಾಡುವ ಪರಿಸ್ಥಿತಿ ಬರುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ’ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article