ಹೊಸ ವರ್ಷಕ್ಕೆ ನಟಿ ಸಮಂತಾ ನೂತನ ಸಂಕಲ್ಪ: ಏನೆಂದು ಗೊತ್ತೇ?


ಮಂಗಳೂರು: ಇತ್ತೀಚಿಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಿ ನೋಡಿದರೂ ಬರೀ ನಟಿ ಸಮಂತಾರ ಬಗ್ಗೆಯೇ ಚರ್ಚೆಗಳು ಕೇಳಿಬರುತ್ತಿದೆ. ನಟ ನಾಗಚೈತನ್ಯ - ಸಮಂತಾ ವಿಚ್ಛೇದನ ವಿಚಾರವಾಗಿ ಸಮಂತಾರೇ ಹೆಚ್ಚಾಗಿ ಟೀಕೆಗೆ ಗುರಿಯಾಗಿದ್ದರು. ಇದರಿಂದ ಬಹಳಷ್ಟು ಬೇಸರಗೊಂಡಿದ್ದರು. 

ಆದರೂ, ತಮ್ಮ ನೋವಿನಿಂದ ಹೊರಬಂದ ಅವರು 'ಪುಷ್ಪಾ' ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗೊಳಗಾಗಿದ್ದರು. ಸಮಂತಾ ಐಟಂ ಡಾನ್ಸ್ ನ ಬೋಲ್ಡ್ ಲುಕ್ ಹಾಗೂ ಹಾಡಿನ ಸಾಹಿತ್ಯದಿಂದಲೂ ವಿವಾದಕ್ಕೆ ಸಿಲುಕಿದ್ದರು. ಇದಾದ ಬಳಿಕ ಅವರು 20 ದಿನಗಳ ಜ್ವರದಿಂದ ಬಳಲಿ ಇದೀಗ ಚೇತರಿಸಿಕೊಂಡಿದ್ದಾರೆ. ಇದೇ ಕಾರಣಗಳಿಂದಾಗಿಯೇ ಸಮಂತಾ ತಮ್ಮ ಬದುಕಿನಲ್ಲಿ 2021 ವರ್ಷವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದೇ ಹೇಳಬೇಕು. 

ಆದರೆ, ಇಷ್ಟೆಲ್ಲಾ ನಡೆದ ಬಳಿಕವೂ ಧೃತಿಗೆಡದ ನಟಿ ಸಮಂತಾ 2022 ರನ್ನು ಎದುರಿಸಲು ರೆಡಿಯಾಗಿದ್ದಾರಂತೆ. ಹೌದು 2021 ರಲ್ಲಿ ತಾವು ಅನುಭವಿಸಿರುವ ಎಲ್ಲಾ ಕಹಿ ಅನುಭವವನ್ನು ಮರೆತು ನೂತನ ವರ್ಷದಿಂದ ತಮ್ಮ ಹೊಸ ಬದುಕಿಗೆ ಮುನ್ನುಡಿ ಬರೆಯಲು ಸಮಂತಾ ಸಜ್ಜಾಗಿದ್ದಾರಂತೆ. ಅದು ಹೇಗೆ ಅಂತೀರಾ ... ? ಸಮಂತಾ ಬ್ಯಾಕ್ ಟು ಜಿಮ್ ಎಂದು ಹೇಳಿದ್ದಾರೆ. ಇದೀಗ ಮತ್ತೆ ಸಮಂತಾ ಜಿಮ್‌ನಲ್ಲಿ ಪ್ರತಿದಿನ ಫುಲ್ ವರ್ಕ್‌ಔಟ್ ಮಾಡಲು ಆರಂಭಿಸಿದ್ದಾರೆ. ಹೀಗೆ ಸಮಂತಾ ಜಿಮ್‌ನಲ್ಲಿ ಹಾಟ್ ಉಡುಪುಗಳನ್ನು ಧರಿಸಿ ವರ್ಕ್‌ಔಟ್ ಮಾಡುತ್ತಿರುವ ಒಂದಿಷ್ಟು ಫೋಟೋಗಳು, ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. "ಸಮಂತಾ ಗೇರಿಂಗ್ ಅಪ್ ಫಾರ್ - 2022" ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡಿ ಫುಲ್ ದಿಲ್ ಖುಷ್ ಆಗಿದ್ದಾರೆ. 

ಅಭಿಮಾನಿಗಳು ಪ್ರೀತಿಯಿಂದ 'ಸ್ಯಾಮ್' ಎಂದು ಕರೆಯುವ ನಟಿ ಸಮಂತಾ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ವಿಧಾನ ಕಂಡರೆ ಬಹುತೇಕ ಎಲ್ಲರಿಗೂ ಅವರು ಯಾವುದೋ ಧೃಡವಾದ ಹೊಸ ಸಂಕಲ್ಪ ಮಾಡಿರುವ ಹಾಗೆ ಕಾಣುತ್ತಿದೆ.