-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕೋವಿಡ್ ಪಾಸಿಟಿವ್ ಬಂದ ಶಿಕ್ಷಕಿ ವಿಮಾನದ ಟಾಯ್ಲೆಟ್ ನಲ್ಲಿ ಕ್ವಾರೆಂಟೈನ್

ಕೋವಿಡ್ ಪಾಸಿಟಿವ್ ಬಂದ ಶಿಕ್ಷಕಿ ವಿಮಾನದ ಟಾಯ್ಲೆಟ್ ನಲ್ಲಿ ಕ್ವಾರೆಂಟೈನ್

ನ್ಯೂಯಾರ್ಕ್‌: ವಿಮಾನದಲ್ಲಿ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಎಲ್ಲರಿಗೂ ಕೋವಿಡ್‌ ಟೆಸ್ಟ್ ಕಡ್ಡಾಯ. ಇಂಥಹದ್ದೇ ಸಂದರ್ಭವೊಂದರಲ್ಲಿ ನೆಗೆಟಿವ್‌ ಬಂದ ಮಹಿಳೆಯೊಬ್ಬರನ್ನು ವಿಮಾನದಲ್ಲಿ ಪ್ರಯಾಣಿಸಲು ಅನುಮತಿಸಲಾಗಿತ್ತು. ಆದರೆ ಪ್ರಯಾಣ ಮಾಡುತ್ತಿದ್ದ ವೇಳೆ ಆಕೆಗೆ ಕೋವಿಡ್ ಪಾಸಿಟಿವ್‌ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಟಾಯ್ಲೆಟ್‌ನಲ್ಲಿಯೇ ಕ್ವಾರಂಟೈನ್‌ ಮಾಡಿರುವ ವಿಚಿತ್ರ ಘಟನೆಯೊಂದು ಷಿಕಾಗೋದಲ್ಲಿ ನಡೆದಿದೆ. 

ಮಿಚಿಗನ್‌ ಮೂಲದ ಶಿಕ್ಷಕಿ ಮಾರೀಸಾ ಫೊಟಿಯೊ ಎಂಬಾಕೆ ವಿಮಾನದ ಟಾಯ್ಲೆಟ್‌ನಲ್ಲಿ ಮೂರು ಗಂಟೆಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈಕೆ ಷಿಕಾಗೊದಿಂದ ಐಲ್ಯಾಂಡ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಆಕೆಯ ಬಳಿ ಕೋವಿಡ್ ನೆಗೆಟಿವ್‌ ವರದಿಯಿತ್ತು. ವಿಮಾನದ ಒಳಗೆ ಪ್ರವೇಶ ಮಾಡುವಾಗಲೂ ತಪಾಸಣೆಯಲ್ಲಿ ನೆಗೆಟಿವ್‌ ಎಂದೇ ತೋರಿಸಿತು. 

ವಿಮಾನ ಪ್ರಯಾಣಕ್ಕೂ ಮುನ್ನ ಆರ್‌ಟಿ-ಪಿಸಿಆರ್‌ ಹಾಗೂ ಐದು ಬಾರಿ ರ‍್ಯಾಪಿಡ್‌ ಪರೀಕ್ಷೆ ಮಾಡಿಸಿದ ಸಂದರ್ಭ ಅದರಲ್ಲಿಯೂ ನೆಗೆಟಿವ್‌ ಬಂದಿತ್ತು. ಆದರೆ ದುರಾದೃಷ್ಟಕ್ಕೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರ‍್ಯಾಪಿಡ್‌ ಕೋವಿಡ್‌ ತಪಾಸಣೆಗೆ ಒಳಪಡಿಸಲಾಗಿದೆ. ಆಗ ಅವರಿಗೆ ಪಾಸಿಟಿವ್‌ ಎಂಬ ವರದಿ ಬಂದಿದೆ. ಆದ್ದರಿಂದ ತಕ್ಷಣ ಅವರನ್ನು ವಿಮಾನದಲ್ಲಿರುವ ಟಾಯ್ಲೆಟ್‌ ಒಳಗೆ ಕ್ವಾರಂಟೈನ್‌ ಮಾಡಲಾಗಿದೆ. ಈ ಮಹಿಳೆಗೆ ಎರಡೂ ಡೋಸ್‌ ಲಸಿಕೆಯೂ ಆಗಿದೆ. 

"ಚಲಿಸುತ್ತಿದ್ದ ವಿಮಾನದಲ್ಲಿದ್ದಾಗಲೇ ತನಗೆ ಕೋವಿಡ್‌ ತಗುಲಿರುವ ವಿಚಾರ ತಿಳಿದು ಅಳುವೇ ಬಂದಿತ್ತು. ವಿಮಾನ ಪ್ರಯಾಣಕ್ಕೂ ಮುನ್ನ ಕುಟುಂಬದವರೊಂದಿಗೆ ಊಟ ಮಾಡಿದ್ದೆ. ವಿಮಾನದಲ್ಲಿ ಹಲವರ ಜೊತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೆ. ಈ ಎಲ್ಲಾ ವಿಚಾರಗಳನ್ನು ನೆನೆದು ನನಗೆ ಭಯವಾಯಿತು" ಎಂದು ಶಿಕ್ಷಕಿ ಹೇಳಿಕೊಂಡಿದ್ದಾರೆ.  ಸೋಂಕು ದೃಢಪಟ್ಟಿದೆ ಎಂದು ತಿಳಿದ ತಕ್ಷಣ ಅವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಮಾನದಲ್ಲಿ ಪ್ರಯಾಣಿಕರು ತುಂಬಿದ್ದರಿಂದ ಅನಿವಾರ್ಯವಾಗಿ ಟಾಯ್ಲೆಟ್‌ನಲ್ಲಿ ಐಸೊಲೇಟ್‌ ಆಗುವಂತೆ ನೋಡಿಕೊಳ್ಳಬೇಕಾಯಿತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ