-->
ಸಮವಸ್ತ್ರ ಧರಿಸಿ ಫೋಟೋ ಶೂಟ್ ಮಾಡಿ ಎಡವಟ್ಟು: ಸಂಕಷ್ಟ ಎದುರಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿ

ಸಮವಸ್ತ್ರ ಧರಿಸಿ ಫೋಟೋ ಶೂಟ್ ಮಾಡಿ ಎಡವಟ್ಟು: ಸಂಕಷ್ಟ ಎದುರಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿ

ಕೋಯಿಕ್ಕೋಡ್​: ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಪೊಲೀಸ್ ಯೂನಿಫಾರ್ಮ್​ ಧರಿಸಿ ಫೋಟೋಶೋಟ್​ ಮಾಡಿರುವುದಕ್ಕೆ ಪೊಲೀಸ್​ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. 

'ಸೇವ್​ ದಿ ಡೇಟ್​' ಎಂಬ ಟ್ಯಾಗ್​ಲೈನ್​ನೊಂದಿಗೆ ಕೆಲ ದಿನಗಳ ಹಿಂದೆ ಕೋಝಿಕ್ಕೋಡ್​ ನಗರದ ಮಹಿಳಾ ಸಬ್​ಇನ್ಸ್​ಪೆಕ್ಟರ್ ಸಮವಸ್ತ್ರದಲ್ಲಿ​ ಫೋಟೋಶೂಟ್​ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಫೋಟೋಗಳು ತುಂಬಾ ವೈರಲ್​ ಆಗಿದ್ದು, ಇದೀಗ ಈ ಫೋಟೊಗೆ ತೀವ್ರ ಟೀಕೆಗಳು ಕೇಳಿಬರುತ್ತಿವೆ.

2015 ರಲ್ಲಿ ಕೇರಳ ಡಿಜಿಪಿ ಆಗಿದ್ದ ಟಿ.ಪಿ.ಸೆನ್‌ಕುಮಾರ್ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಮವಸ್ತ್ರವನ್ನು ಧರಿಸಿರುವ ಪೋಟೋಗಳನ್ನು ಪೋಸ್ಟ್ ಮಾಡದಿರುವಂತೆ ಆದೇಶವನ್ನು ಹೊರಡಿಸಿದ್ದರು. ಅಲ್ಲದೆ, ಜಾಲತಾಣಗಳಲ್ಲಿ ಸಂವಹನ ನಡೆಸುವ ಸಂದರ್ಭ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಈ ಆದೇಶವನ್ನು ಉಲ್ಲಂಘಿಸಿ ಮಹಿಳಾ ಪೊಲೀಸ್​ ಅಧಿಕಾರಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ‌‌. ಈ ಬಗ್ಗೆ ಅವರು ಕಠಿಣ ಕ್ರಮ ಎದರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ‌.

Ads on article

Advertise in articles 1

advertising articles 2

Advertise under the article