-->

ಅಂದು ಅಪಹಾಸ್ಯಕ್ಕೊಳಗಾದೆ, ಅದರಿಂದ ಖಿನ್ನತೆಗೆ ಜಾರಿದೆ... ಆ ನೋವನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ವಿಶ್ವ ಭುವನ ಸುಂದರಿ ಆದೆ...!

ಅಂದು ಅಪಹಾಸ್ಯಕ್ಕೊಳಗಾದೆ, ಅದರಿಂದ ಖಿನ್ನತೆಗೆ ಜಾರಿದೆ... ಆ ನೋವನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ವಿಶ್ವ ಭುವನ ಸುಂದರಿ ಆದೆ...!

ಚಂಡೀಗಢ: ಇಸ್ರೇಲ್‌ನಲ್ಲಿ ನಡೆದಿರುವ 70ನೇ ವಿಶ್ವ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಸಂಧು ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿದ್ದಾರೆ. 

ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ನಡೆದಿರುವ 70ನೇ ವಿಶ್ವ ಭುವನ ಸುಂದರಿ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಜಯ ಗಳಿಸುವುದರೊಂದಿಗೆ, ಮಿಸ್‌ ಯೂನಿವರ್ಸ್‌ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ ಹರ್ನಾಜ್ ಸಂಧು. ಆದರೆ ಭಾರತಕ್ಕೆ ಎರಡು ದಶಕಗಳ ಬಳಿಕ ಈ ಪಟ್ಟವನ್ನು ತಂದು ಕೊಟ್ಟ ಅವರು ಜೀವನದಲ್ಲಿ ಸಾಗಿ ಬಂದಿರುವ ಹಾದಿ ಮಾತ್ರ ಭಾರೀ ಕ್ಲಿಷ್ಟಕರವಾದದ್ದು.  ಚಂಡೀಗಢದವರಾದ ಹರ್ನಾಜ್ ಸಂಧು ಬಾಲ್ಯದಲ್ಲಿಯೇ ಖಿನ್ನತೆಗೆ ಒಳಗಾಗಿದ್ದರಂತೆ. ಇದಕ್ಕೆ ಕಾರಣ, ಅವರು ತೀರಾ ತೆಳ್ಳಗಿದ್ದಿರೋದು. ಉಳಿದೆಲ್ಲರಿಗಿಂತ ತುಂಬಾ ತೆಳ್ಳಗಿದ್ದ ಹರ್ನಾಜ್‌ಳನ್ನು ಶಾಲೆಯಲ್ಲಿ ವಿದ್ಯಾರ್ಥಿಗಳು ಛೇಡಿಸುತ್ತಿದ್ದಂತೆ. ಅಪೌಷ್ಠಿಕತೆಯಿಂದ ಬಳಲುತ್ತಿರುವವರಂತೆ ಕಾಣಿಸುತ್ತಿದ್ದಿ ಎಂದು ಕೆಲವರು ಹಂಗಿಸುತ್ತಿದ್ದಂತೆ. ಇದೇ ಕಾರಣದಿಂದ ತಾವು ಖಿನ್ನತೆಗೆ ಜಾರಿದ್ದೆನೆಂದು ಸ್ವತಃ ಹರ್ನಾಜ್‌ ಹೇಳಿದ್ದಾರೆ. 

ಆ ಸಂದರ್ಭದಲ್ಲಿ ಶಾಲೆಗೆ ಹೋಗುವುದು, ಜನರೊಂದಿಗೆ ಬೆರೆಯುವುದಕ್ಕೆ ತೀರಾ ಮುಜುಗುರವಾಗುತ್ತಿತ್ತು. ಅಂದು ನನ್ನನ್ನು ನೋಡಿದವರೆಲ್ಲರೂ ಒಂದು ರೀತಿಯ ಮುಖದ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದರು. ಆ ಕಾರಣದಿಂದಲೇ ನಾನು ಖಿನ್ನತೆಗೆ ಜಾರಿದ್ದೆ ಎಂದಿದ್ದಾರೆ ಹರ್ನಾಜ್‌.  

ಆದರೆ ಇದೇ ಕಾರಣಕ್ಕೆ ನನಗೆ ತೆಳ್ಳಗಿನ ಈ ಶರೀರವನ್ನೇ ಜೀವನದ ಸಾಧನೆಗಾಗಿ ಏಕೆ ತಯಾರು ಮಾಡಬಾರದೆಂದು ಅನಿಸಿತ್ತು. ಅದಕ್ಕಾಗಿ ಈ ನಿಟ್ಟಿನಲ್ಲಿ ಮುಂದುವರಿದಡ. ಮಾಡೆಲ್‌ಗಳಿಗೆ ಎಷ್ಟು ತೆಳ್ಳಗಿನ ಶರೀರ ಬೇಕೋ ಅಷ್ಟರ ಮಟ್ಟಿಗೆ ತಮ್ಮ ಶರೀರವನ್ನು ತಯಾರು ಮಾಡುವುದಾಗಿ ಪಣತೊಟ್ಟರು ಹರ್ನಾಜ್‌.


ಅದೇ ದಾರಿಯಲ್ಲಿ ಸಾಗಿದರು. ಇದಕ್ಕೆ ಅವರ ಕುಟುಂಬಸ್ಥರೂ ಸಾಕಷ್ಟು ಸಹಕಾರ ನೀಡಿದರು. ಕುದುರೆ ಸವಾರಿ, ಈಜು ಕಲಿತರು. ಶರೀರವನ್ನು ಇರುವುದಕ್ಕಿಂತ ಕೊಂಚ ದಷ್ಟಪುಷ್ಠ ಮಾಡುವತ್ತ ಗಮನ ಹರಿಸಿದರು. 

ಇದೀಗ ಹರ್ನಾಜ್‌ ಸಂಧು ಶ್ರಮ ಫಲಕೊಟ್ಟಿದೆ. ಅಪಹಾಸ್ಯ ಮಾಡಿದವರೇ ಇಂದು ಆಕೆಯನ್ನು ಬೆರಗುಗಣ್ಣಿನಿಂದ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತರು. ಅಷ್ಟು ಮಾತ್ರವಲ್ಲದೆ ಇಪ್ಪತ್ತು ವರ್ಷಗಳ ಬಳಿಕ ಭಾರತಕ್ಕೆ ಮಿಸ್‌ ಯೂನಿವರ್ಸ್‌ ಪಟ್ಟವನ್ನು ಗಳಿಸಿ ಕೊಟ್ಟಿದ್ದಾರೆ. 

ಮಾಡೆಲಿಂಗ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗುರಿಸಾಧಿಸಿದ್ದಾರೆ ಈಕೆ. ಹರ್ನಾಜ್‌ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‌ನಲ್ಲಿ ಪಡೆದಿದ್ದರು. ಅಲ್ಲಿಯೇ ಪದವಿ, ಸ್ನಾತಕೋತ್ತರ ಪದವಿಯನ್ನೂ ಪೂರೈಸಿದರು. ಇದೀಗ ತಮ್ಮ 21ನೇ ವಯಸ್ಸಿನಲ್ಲಿ, ಅನೇಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಲೇ ಶಿಕ್ಷಣವನ್ನೂ ಮುಂದುವರೆಸುತ್ತಲೇ ಇದ್ದರು. 2017 ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018 ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಕಿರೀಟ ಮುಡಿಗೇರಿಸಿಕೊಂಡರು. 

ಇದೀಗ ಮಿಸ್‌ ಯೂನಿವರ್ಸ್‌ ಆಗಿ ಹೊರಹೊಮ್ಮಿದ್ದಾರೆ. 2000ನೇ ಸಾಲಿನಲ್ಲಿ ಲಾರಾ ದತ್ತ ಭುವನ ಸುಂದರಿಯಾದ ಬಳಿಕ ಭಾರತದ ಪಾಲಿಗೆ ಈ ಕಿರೀಟ ನನಸಾಗಿಯೇ ಉಳಿದಿತ್ತು. ಲಾರಾ ಅವರಿಗೂ ಮುನ್ನ 1994ರಲ್ಲಿ ಸುಷ್ಮಿತಾ ಸೇನ್‌ ಅವರು ಭುವನ ಸುಂದರಿಯ ಪಟ್ಟ ಏರಿದ್ದರು.

Ads on article

Advertise in articles 1

advertising articles 2

Advertise under the article