-->

Job in Survey Department- 3000 ಸರ್ವೇಯರ್ ಹುದ್ದೆ: PUC, ಡಿಪ್ಲೊಮಾ ಆದವರಿಗೆ ಅವಕಾಶ

Job in Survey Department- 3000 ಸರ್ವೇಯರ್ ಹುದ್ದೆ: PUC, ಡಿಪ್ಲೊಮಾ ಆದವರಿಗೆ ಅವಕಾಶ

Job in Survey Department- 3000 ಸರ್ವೇಯರ್ ಹುದ್ದೆ: PUC, ಡಿಪ್ಲೊಮಾ ಆದವರಿಗೆ ಅವಕಾಶ



ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಸರ್ವೇಯರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆ ಈ ಬಗ್ಗೆ ಅಧಿಸೂಚನೆ ಮತ್ತು ಪ್ರಕಟಣೆ ಹೊರಡಿಸಿದೆ.






ರಾಜ್ಯದ ವಿವಿಧೆಡೆ ಒಟ್ಟು 3,000 ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್‌ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್ 31, 2021ರಂದು ಕೊನೆಯ ದಿನಾಂಕವಾಗಿರುತ್ತದೆ.




ಭೂಮಾಪಕನ ಕೆಲಸ ನಿರ್ವಹಿಸಲು ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಜನವರಿ ಯಾ ಫೆಬ್ರವರಿ, 2022ರಲ್ಲಿ ನಡೆಸಲು ಉದ್ದೇಶಿಸಲಾಗಿದೆ.




ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಒಂದು ಅಭ್ಯರ್ಥಿಗೆ ಒಂದು ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಇರುತ್ತದೆ. ಅರ್ಜಿಯನ್ನು ಖುದ್ದಾಗಿ ಯಾ ಅಂಚೆ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ.


District Name             No. of Posts

Bagalkot                     60

Ballari                         27

Belagavi                     112

Bangalore                        65

Bangalore Urban            12

Bidar                                13

Chamarajnagar              50

Chikkamagaluru            112

Chitradurga                        93

Dakshina Kannada                        66

Davanagere                        183

Dharwad                        59

Gadag                        46

Gulbarga                        12

Hassan                        136

Haveri                        229

Kodagu                        100

Kolar                        137

Koppal                        66

Mandya                        195

Mysore                        136

Raichur                         54

Ramanagara                155

Shimoga                        127

Tumkur                         334

Udupi                        131

Uttara Kannada         101

Bijapur                        76

Yadgir                        45

Chikkaballapur           39

Vijayanagara                29



ಆನ್‌ಲೈನ್ ಮೂಲಕ ಸಲ್ಲಿಸಲಾಗುವ ಅರ್ಜಿಯನ್ನು rdservices.karnataka.gov.in ಸಲ್ಲಿಸಬೇಕು. ದಿನಾಂಕ 31/12/2021ರಂದು ಸಂಜೆ 5 ಗಂಟೆ ಬಳಿಕ ಸಲ್ಲಿಕೆಯಾಗುವ ಯಾವುದೇ ಅರ್ಜಿಯನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.



ಅರ್ಜಿ ಶುಲ್ಕ ರೂ. 1000/-


ಅಧಿಸೂಚನೆಯನ್ನು ಪಡೆಯಲು ಈ ಲಿಂಕ್ ಬಳಸಬಹುದು: rdservices.karnataka.gov.in


ಶೈಕ್ಷಣಿಕ ಅರ್ಹತೆ: ಕನಿಷ್ಟ ಪದವಿ ಪೂರ್ವ ಶಿಕ್ಷಣ( PUC) ಅಥವಾ ಸಿಬಿಎಸ್‌ಸಿಯಲ್ಲಿ 12ನೇ ತರಗತಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇ. 60ಕ್ಕಿಂತ ಹೆಚ್ಚಿನ ಅಂಕ ಪಡೆದು ಪಾಸಾಗಿರಬೇಕು.


ಅಥವಾ


ಬಿಇ-ಸಿವಿಲ್/ಬಿಟೆಕ್-ಸಿವಿಲ್ ಅಥವಾ ಸಿವಿಲ್ ಎಂಜಿನಿಯರ್ ಡಿಪ್ಲೊಮಾ ಉತ್ತೀರ್ಣರಾಗಿಬೇಕು.


ಅಥವಾ


ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಸಿಟಿ ಸರ್ವೇ ಯಲ್ಲಿ ಪದವಿ ಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿಬೇಕು.


ಅಥವಾ


ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೇ ಟ್ರೇಡ್ ನಲ್ಲಿ ಉತ್ತೀರ್ಣರಾಗಿಬೇಕು.


ಅಥವಾ


ರಾಜ್ಯ ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆ ಅಥವಾ ಸರ್ವೇ ಆಫ್ ಇಂಡಿಯಾದಲ್ಲಿ ಕನಿಷ್ಟ 10 ವರ್ಷಗಳ ಭೂ ಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಿಗೆ ಪಡೆಯಲು ಅರ್ಹರಾಗಿರುತ್ತಾರೆ.



ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಯು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಬಳಿ ಹಾಳೆಯ ಮೇಲೆ ಅಂಟಿಸಿ ಚಿತ್ರದ ಕೆಳಗೆ (ಹಾಳೆಯ ಮೇಲೆ) ಪೂರ್ಣ ಸಹಿ ಮಾಡಿದ ನಂತರ ಸ್ಕ್ಯಾನ್ ಮಾಡಿ ಅಪ್‌ಲೋಡ್( Size 10 -50 KB) ಮಾಲು ಸಿದ್ಧತೆ ಮಾಡಿಕೊಳ್ಳಬೇಕು.



ಅರ್ಜಿ ತೆರೆಯುವ ಮೊದಲು ಭಾವಚಿತ್ರ ಹಾಗೂ ಸಹಿಯ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಳಿಸಬೇಕು. ಮತ್ತು ಅದರ ಸೈಜ್‌ನ್ನು ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಬೇಕು.



ಅಧಿಸೂಚನೆಯನ್ನು ಪಡೆಯಲು ಈ ಲಿಂಕ್ ಬಳಸಬಹುದು: https://landrecords.karnataka.gov.in/


https://landrecords.karnataka.gov.in/LSrecruitment/





Ads on article

Advertise in articles 1

advertising articles 2

Advertise under the article